ಸಕಲೇಶಪುರ: ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಸಮೀಪ ಕ್ಯಾಂಟರ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಸಕಲೇಶಪುರ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಎಸ್ ಮೋಹನ್ ಕುಮಾರ್ ರವರಿಗೆ ತೀವ್ರ ಪೆಟ್ಟು ಬಿದ್ದು ಹಾಸನದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ.ಹೆತ್ತೂರಿನ ಗುತ್ತಿಗೆದಾರ ಸಂತೋಷ್ ಬಾಳೆ ಎಂಬುವರ ಕಾರಿನಲ್ಲಿ ಮೋಹನ್ ಕುಮಾರ್ ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದರೆಂದು ತಿಳಿದು ಬಂದಿದೆ.ಕಾರಿನಲ್ಲಿದ್ದ ಇನ್ನಿಬ್ಬರ ಪರಿಸ್ಥಿತಿ ಸಹ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಡಿಕ್ಕಿ ಸಂಭವಿಸಿದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗಜ್ಜಾಗಿದ್ದು ಕ್ಯಾಂಟರ್ ಸಹ ಪಲ್ಟಿ ಹೊಡೆದು ಹಾನಿಗೀಡಾಗಿದೆ. ಮೋಹನ್ ಕುಮಾರ್ ರವರು ಉತ್ತಮ ಅಧಿಕಾರಿಯಾಗಿದ್ದರು ಎಂದು ಹೇಳಲಾಗಿದೆ.