ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ ಎನ್.ಎಚ್.75 ರ ಕಳಪೆ ಕಾಮಗಾರಿಯಿಂದಾಗಿ ಬಾಗೆ ಸಮೀಪ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು ಯಾವುದೇ ಕ್ಷಣದಲ್ಲಿಯಾದರು ರಸ್ತೆ ಕುಸಿಯುವ ಸಂಭವ ಇರುವ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿ ಪಕ್ಕದ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮೂಲಕ ಮುಂದಾಗುವ ಅನಾಹುತವನ್ನು ಸಂಬಂಧಿಸಿದ ಅಧಿಕಾರಿಗಳು ತಡೆಯಬೇಕು, ಹಾಗೇಯೇ ಕಳಪೆ ಕಾಮಗಾರಿ ಮಾಡಿರುವ ರಾಜ್ ಕಮಲ್ ಕಂಪನಿಯ ಗುತ್ತಿಗೆಯನ್ನು ರದ್ದು ಪಡಿಸಬೇಕು ಎಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ ಆಗ್ರಹಿಸಿದ್ದಾರೆ.