ದಿನಾಂಕ 22-07-2023 ರಂದು ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ನ 2023-24ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ಹಾಸನದ ಪೇರಲ್ಸ್ (ಸದರನ್ ಸ್ಟಾರ್) ಹೊಟೇಲ್ ನಲ್ಲಿ ನೆರವೇರಿತು.
ಕ್ಲಬ್ ನೂತನ ಅಧ್ಯಕ್ಷರಾಗಿ ಹೆಚ್. ಆರ್ ನಾಗೇಶ್ ಮತ್ತು ಕಾರ್ಯದರ್ಶಿಯಾಗಿ ಕೆ.ಎಸ್ ಯೋಗೇಶ್ ಮತ್ತು ಖಜಾಂಚಿಯಾಗಿ ಕೆ. ಎಸ್ ರವಿ ಮತ್ತು ಅವರ ತಂಡದವರಿಗೆ PDG ಬಿ.ಎನ್ ರಮೇಶ್ ರವರು ಪದವಿ ಪ್ರಧಾನ ಮಾಡಿದರು.
ರೋಟರಿ ವಲಯ 9(A) ನ ಸಹಾಯಕ ರಾಜ್ಯಪಾಲರಾದ ಶ್ರೀಮತಿ ಡಾ!! ಸೌಮ್ಯ ಮಣಿ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕಾರ ಮಾಡಿದ ರೋ ಹೆಚ್.ಆರ್ ನಾಗೇಶ್ ರವರು ರೋಟರಿ ಸಂಸ್ಥೆಯ ಸದಸ್ಯರಾಗುವ ಪ್ರತಿಯೊಬ್ಬರಿಗೂ ನಾಯಕತ್ವ ರೂಪಿಸಿಕೊಳ್ಳುವ ವಿಫುಲ ಅವಕಾಶ ದೊರೆಯುತ್ತದೆ. ಯೋಜನೆ ಬಗ್ಗೆ ಕಾರ್ಯಗಳು ಶಿಸ್ತು ಜೀವನ ಅವಿಭಾಜ್ಯ ಅಂಗವಾಗಬೇಕು ಜಗತ್ತಿನ ಜನರಿಗೆ ಆಶಾಕಿರಣ ಮೂಡಿಸುವ ಧ್ಯೇಯ ವಾಕ್ಯವನ್ನು ರೋಟರಿ ಸಂಸ್ಥೆ ಈ ವರ್ಷ ರೂಪಿಸಿದೆ ಎಂದರು” ಕಾರ್ಯಕ್ರಮದಲ್ಲಿ ವಲಯ ಸೇನಾನಿ ಯೋಗೇಶ್ ಎಸ್, ನಿಕಟಪೂರ್ವ ಅಧ್ಯಕ್ಷರಾದ ವಿಕ್ರಂ ರವರು ಹಾಗೂ ನಿಕಟಪೂರ್ವ ಕಾರ್ಯದರ್ಶಿಗಳಾದ ನವೀನ್ ರವರು ಉಪಸಿತರಿದ್ದರು.