ಸಕಲೇಶಪುರ.ತಾಲ್ಲೂಕಿನ ಹಾನುಬಾಳು ಹೋಬಳಿಯ ಅಗ್ನಿಕೂಡಿಗೆಯ ಮರಗಿಡಿ ಗ್ರಾಮದಲ್ಲಿ ವಿಪರೀತ ಮಳೆಯಿಂದಾಗಿ ಗ್ರಾಮದ ಗೌರಮ್ಮ ಮತ್ತು ಕಮಲಮ್ಮರವರ ಮನೆಯ ಮೇಲೆ ಗುಡ್ಡ ಕುಸಿತದಿಂದ ಮನೆ ಮೇಲೆ ಮಣ್ಣು ಬಿದ್ದು ಇವರ ಜೀವನ ಅಸ್ತವ್ಯಸ್ತವಾಗಿದೆ.
ಸ್ಥಳಕ್ಕೆ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ್ ಸಿಂಘ್ವಿ ಹಾನುಬಾಳು ಪಂಚಾಯತಿ ಕಾರ್ಯದರ್ಶಿ ಅನಿಲ್ ಸಂಪುಗೂಡು ದೇವಾಲಕೆರೆ ಪಂಚಾಯಿತಿ ಅಧ್ಯಕ್ಷರಾದ ಡಿಕೆ ಭರತವರು ಭೇಟಿ ನೀಡಿ ಪರಿಶೀಲನೆ ಮಾಡಿ ಶಾಸಕರಿಗೆ ಮತ್ತು ತಹಶೀಲ್ದಾರರಿಗೆ ಮಾಹಿತಿಯನ್ನು ನೀಡಿದರು.