
ಸಕಲೇಶಪುರ : ತಾಲ್ಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೋಮವಾರದಂದು ವಳಲಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ನೆಡೆಸಲಾಯಿತು.
ಈ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಳಲಹಳ್ಳಿ ಕ್ಲಸ್ಟರ್ ಮಟ್ಟದ ಉಮ್ಮತೂರು , ಹೆಚ್ ವಿ ಹಳ್ಳಿ,ಹಡ್ಲಹಳ್ಳಿ,ವಳಲಹಳ್ಳಿ, ಹಾಗೂ ಚಿನ್ನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಸುಮಾರು 90 ವಿದ್ಯಾರ್ಥಿಗಳು ಭಾಗವಹಿಸಿ,ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಪ್ರತಿಭಾ ಕಾರಂಜಿ ಸ್ಪರ್ಧಿಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್, ಹಿಂದಿ ಕಂಠ ಪಾಠ, ಛದ್ಮವೇಷ ವೇಷ,ಮಣ್ಣಿನ ಮಾದರಿ,ಕಥೆ ಹೇಳುವುದು,ಲಘು ಸಂಗೀತ, ಕವನ ವಚನ, ಮಿಮಿಕ್ರಿ, ಆಶು ಭಾಷಣ,ಸೇರಿದಂತೆ ಅನೇಕ ಸ್ವರ್ಧೆ ಏರ್ಪಡಿಸಲಾಯಿತು.ಗೆದ್ದ ವಿದ್ಯಾರ್ಥಿಗಳಿಗೆ ಬರವಣಿಗೆ ಸಾಮಗ್ರಿ ಇರುವ ಪೌಚ್ ಕೊಡಲಾಯಿತು.ಬಹುಮಾನವನ್ನು ಗಳಿಸಿದ ವಿದ್ಯಾರ್ಥಿಗಳನ್ನು ತಾಲೂಕು ಮಟ್ಟಕ್ಕೆ ಆಯ್ಕೆಯಾದರು .ಒಟ್ಟಾರೆ ವಿದ್ಯಾರ್ಥಿಗಳ ಪ್ರತಿಭೆಯನು ಗುರುತಿಸುವ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಳಲಹಳ್ಳಿ ಕ್ಲಸ್ಟರ್ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅತ್ಯಂತ ಸಂಭ್ರಮ ಸಡಗದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಎಸ್. ಡಿ.ಎಮ್. ಸಿ ಅಧ್ಯಕ್ಷರಾದ ಹೂವಣ್ಣ, ಇಲಾಖೆಯ ಅಧಿಕಾರಿಗಳಾದ ಗಂಗಾಧರ್ ಹಾಗೂ ಮಲ್ಲೇಶ್, ಕುರುಬತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ್, ಸದಸ್ಯರಾದ ಶೀಲರಾಮಚಂದ್ರ, ಪರಮೇಶ್, ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ್, ನಿವೃತ ಶಿಕ್ಷಕರಾದ ತಮ್ಮೇಗೌಡ, ಕೃಷ್ಣೇಗೌಡ ,ಪಿ ಎಚ್ ನಾಗರಾಜ್, ದಾನಿಗಳಾದ ಸ್ವಾಮಿಗೌಡ, ವೆಂಕಟೇಶ್ ಗೌಡ ,ಗುಂಡೇಗೌಡ ,ಮುಖ್ಯ ಶಿಕ್ಷಕರಾದ ಶಂಕರ್, ಸಿ.ಆರ್.ಪಿ.ಪ್ರವೀಣ್, ಇತರ ಶಿಕ್ಷಕರು,ಗ್ರಾಮಸ್ಥರು ಹಾಜರಿದ್ದರು .
