
ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಅಭಿವೃದ್ಧಿಯಲ್ಲಿ ಮಾದರಿ ಗ್ರಾಮ ಪಂಚಾಯಿತಿ ಎನಿಸಿಕೊಂಡಿರುವ ಕುರಭತ್ತೂರು ಗ್ರಾಮ ಪಂಚಾಯಿತಿಯು ಮತ್ತೊಮ್ಮೆ ತಾಲೂಕಿನದ್ಯಾತ ಪ್ರಶಂಸೆ ಕಾರಣವಾಗಿದೆ.
ಶೆಟ್ಟಿಹಳ್ಳಿಯ ವಿಕಲಚೇತನ ಶಿವು ಎಂಬ 27 ವರ್ಷದ ಯುವಕನಿಗೆ 2022-23ನೇ ಸಾಲಿನ 15 ನೇ ಹಣಕಾಸಿನ ಅಂಗವಿಕಲರ ಅನುದಾನದಲ್ಲಿ 41 ಸಾವಿರ ರೂ ವೆಚ್ಚದಲ್ಲಿ ದಿನಸಿ ಅಂಗಡಿಯನ್ನು ಮಾಡಿಕೊಟ್ಟಿದ್ದಾರೆ.
ಸರ್ಕಾರದಿಂದ ಬರುವ ಯಾವುದೇ ಅನುದಾನವನ್ನು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಸೇರಿ ಪಕ್ಷ ಬೇದ ಮರೆತು, ಚರ್ಚಿಸಿ ಫಲಾನುಭಾವಿಗಳಿಗೆ ಸಮರ್ಪಕವಾಗಿ ಅನುದಾನಗಳು ಸೇರುವಂತೆ ನೋಡಿಕೊಳ್ಳುತ್ತಿರುವ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಧರ್ಮಪ್ಪ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರಿಗೆ ತಾಲೂಕಿನಾದ್ಯಂತ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.

