ಸಕಲೇಶಪುರ : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ 89 ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವದ ಅಂಗವಾಗಿ ಭಾರತದ ಇತಿಹಾಸ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ಪುಣ್ಯ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಫೆಬ್ರವರಿ 23 ರಿಂದ ಮಾರ್ಚ್ 2, 2025ರ ವರೆಗೆ 89 ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ದ್ವಾದಶ ಜ್ಯೋತಿರ್ಲಿಂಗ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಎಂದು ಪ್ರಜಾ ಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಕಲೇಶಪುರ ಶಾಖೆಯ ಸಂಚಾಲಕಿ ಚಂದ್ರಿಕಾ ಹೇಳಿದ್ದಾರೆ.

ಬುದವಾರ ಪಟ್ಟಣದ ಲಕ್ಷ್ಮಿಪುರ ಬಡವಣೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಶಾಖೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವಿವಿದ ಶಾಖೆಗಳಿಂದ 600 ಕ್ಕೂ ಹೆಚ್ಚು ನರು ಜನರು ಆಗಮಿಸುತ್ತಿದ್ದಾರೆ ಅದೆ ರೀತಿ ಸಕಲೇಶಪುರದ ಜನತೆಯು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು

ಈ ನಂತರ ಹಾಸನ ಶಾಖೆಯ ಪ್ರತಿನಿಧಿ ಶ್ರೀ ಬಾಬಣ್ಣ ಮಾತನಾಡಿ, “ನಮ್ಮ ಸಂಸ್ಥೆಯು ಧಾರ್ಮಿಕ ಸಂಸ್ಥೆ ಅಲ್ಲ, ಬದಲಾಗಿ ಮನುಷ್ಯ ತನ್ನನ್ನು ತಾನೇ ಅರ್ಥಮಾಡಿಕೊಳ್ಳಲು ಮಾರ್ಗದರ್ಶನ ನೀಡುವ ಆಧ್ಯಾತ್ಮಿಕ ಸಂಸ್ಥೆಯಾಗಿದೆ” ಎಂದು ಹೇಳಿದ ಅವರು “ಆಸ್ತಿ ಸಂಪಾದನೆ ಮಾತ್ರ ಮನುಷ್ಯನ ಗುರಿಯಾಗಬಾರದು. ನೈಸರ್ಗಿಕ ಸುಂದರತೆಯನ್ನು ಪುನಃಸ್ಥಾಪಿಸಿ, ಮುಂದಿನ ಪೀಳಿಗೆಗೆ ಆರೋಗ್ಯಕರ ಸಮಾಜವನ್ನು ಸೃಷ್ಠಿಮಾಡುವುದು ನಮ್ಮ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವು ಬ್ಯಾಕರವಳ್ಳಿ ಶ್ರೀ ಗುರುವೇಗೌಡ ಕಲ್ಯಾಣ ಮಂಟಪದ ಪಕ್ಕದಲ್ಲಿ, ಬಸವೇಶ್ವರ ರಸ್ತೆ, ಸಕಲೇಶಪುರದಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ 6 ಗಂಟೆಗೆ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಜ್ಯೋತಿರ್ಲಿಂಗಗಳ ಮಹತ್ವ, ಆಧ್ಯಾತ್ಮಿಕ ತತ್ವ ಹಾಗೂ ಧಾರ್ಮಿಕ ಪರಂಪರೆಯ ಮಹಿಮೆ ಕುರಿತು ವಿವರಣೆ ನೀಡಲಾಗುತ್ತದೆ ಎಂದರು.

ಈ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಹಾಗೂ ಜ್ಯೋತಿರ್ಲಿಂಗ ದರ್ಶನದ ಮೂಲಕ ಆಧ್ಯಾತ್ಮಿಕ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಪುನಃ ಜಾಗೃತಗೊಳಿಸುವ ಉದ್ದೇಶವಿದೆ ಎಂದರು

ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿದ್ಯವನ್ನು ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಾಸನ ಶಾಖೆಯ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಮಿನಾಜಿ, ಆಶ್ರೀರ್ವಚನವನ್ನು ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ಶಿವರಾತ್ರಿಯ ದಿವ್ಯ ಸಂದೇಶವನ್ನು ರಾಜಯೋಗಿ ಬಿ.ಕೆ ರೂಪಾಜಿ ಬೆಂಗಳೂರು ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುನಾಥ್ ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸುತ್ತಿದ್ದು ಎಲ್ಲರೂ ಈ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಮನವಿ ಮಾಡಿದರು

ಈ ಸಂದರ್ಭದಲ್ಲಿ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಬಸವರಾಜು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *