ಸಕಲೇಶಪುರ :- ವಿದ್ಯಾರ್ಥಿಗಳು ಕೇವಲ ಬಹುಮಾನಕ್ಕಾಗಿ ಸ್ಪರ್ಧೆ ಮಾಡದೆ, ಸಿಕ್ಕ ಅವಕಾಶದಲ್ಲಿ ತಮ್ಮ ಪ್ರತಿಭೆಯನ್ನು ಸಮರ್ಪಕವಾಗಿ ಅನಾವರಣಗೊಳಿಸುವ ಕೆಲಸ ಮಾಡಬೇಕು ಎಂದು ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಯಾದ ದೇವಕಿ ಅಭಿಪ್ರಾಯಪಟ್ಟರು.

ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಹಡ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಕಲೇಶಪುರ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಕಲೇಶಪುರ ಇವರ ವತಿಯಿಂದ ವಳಹಳ್ಳಿ ಕ್ಲಸ್ಟರ್ ನ 7ಶಾಲೆಗಳಿಂದ 90 ವಿದ್ಯಾರ್ಥಿಗಳ FLN ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜನೆ ನಡೆಸಲಾಯಿತು.

ಕಾರ್ಯಕ್ರಮವನ್ನು SDMC ಅಧ್ಯಕ್ಷರಾದ ಹೂವಣ್ಣ ಉದ್ಘಾಟನೆ ಮಾತನಾಡಿದರು.”ಸರ್ಕಾರದ ಎಫ್.ಎಲ್.ಎನ್ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಒಂದು ಯೋಜನೆಯಾಗಿದ್ದು, ಈ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಕೆಯಲ್ಲಿ ನಿಜವಾಗಿ ಮುಂದೆ ಬಂದಿದ್ದಾರೋ ಇಲ್ಲವೋ ಎಂಬ ಪರೀಕ್ಷೆ ಮಾಡಲು ಈ ತರದ ಕಾರ್ಯಕ್ರಮವನ್ನು ಮಾಡಿ ಎಲ್ಲರ ಮುಂದೆ ವಿದ್ಯಾರ್ಥಿಗಳಿಗಳ ಪ್ರತಿಭೆಯನ್ನು ಪ್ರದರ್ಶನ ಅವಕಾಶವನ್ನು ಮಾಡಿಕೊಳ್ಳಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಬರಲಿ ಬಿಡಲಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಹಾಗೂ ವಿದ್ಯಾರ್ಥಿಗಳು ಹೇಗೆ ಪ್ರದರ್ಶನ ಮಾಡಿದ್ದೀರಿ ಹೇಗೆ ತೀರ್ಪುಗಾರರ ಹಾಗೂ ನೆರೆದವರನ್ನು ಗಮನ ಸೆಳೆದಿದ್ದೀರಿ ಎಂಬುದರ ಮೇಲೆ ನಿಮ್ಮ ಪ್ರತಿಭೆ ನಿಂತಿರುತ್ತದೆ. ಹಾಗಾಗಿ ಸಿಕ್ಕಾವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಎಲ್ಲಾ ವಿದ್ಯಾರ್ಥಿಗಳು ಖುಷಿಯಾಗಿ ಸ್ಪರ್ಧೆ ಅನ್ನೋದಕ್ಕಿಂತ ನಾವು ಭಾಗವಹಿಸಬೇಕು ಎಂಬ ಮನೋಭಾವನೆಯನ್ನು ಇಟ್ಟುಕೊಂಡು ಗೆಲ್ಲ ಸಾಧಿಸಬೇಕು.ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಹೆಚ್ಚು ಗಮನ ಕೊಡಬೇಕು ಕಲಿತದ್ದನ್ನು ಆಗಾಗ ಮನನ ಮಾಡಿಕೊಳ್ಳುವುದರೊಂದಿಗೆ ಅದು ಹೆಚ್ಚು ಕಾಲ ನಮ್ಮ ನೆನಪಿನ ಶಕ್ತಿಯಲ್ಲಿ ಉಳಿಯುತ್ತದೆ.ಎಂದು ಹೇಳಿದರು.

ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್ ” ಪ್ರತಿಯೊಂದು ಮಗುವು ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತದೆ. ಅದನ್ನು ಧೈರ್ಯವಾಗಿ ಪ್ರದರ್ಶಿಸಲು ಇಂತಹ ವೇದಿಕೆ ಉತ್ತಮವಾದದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೂ ದಾರಿದೀಪವಾಗಲಿದೆ ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ಮಾಡುವುದರಿಂದ ಸರ್ಕಾರಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿದೆ. ಇದನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಹೇಳಿದರು.

ಈ ಕಲಿಕಾ ಹಬ್ಬದಲ್ಲಿ ವಿದ್ಯಾರ್ಥಿಗಳು ಹಾಡು,ಹಾಗೂ ಕಾಗದದಿಂದ ವಿವಿಧ ರೀತಿಯ ಚಿತ್ರಗಳನ್ನು ಮಾಡುವುದನ್ನು ತರಬೇತಿ ಪಡೆದ ಶಿಕ್ಷಕರಿಂದ ಕಲಿಯುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದರು.

ಈ ಕಾರ್ಯಕ್ರಮದ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ , ಹಡ್ಲಹಳ್ಳಿ ಗ್ರಾಮಸ್ಥರ ಸಹಕಾರದೊಂದಿಗೆ ಬಹಳ ಅತ್ಯುತ್ತಮವಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಹಡ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಶಂಕರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶೋಭ,ಸಿ ಆರ್. ಪಿ ಪ್ರವೀಣ್,ಪತ್ರಕರ್ತರಾದ ಅರುಣಗೌಡ ಕರಡಿಗಾಲ,ಗ್ರಾಮ ಪಂಚಾಯಿತಿ ಸದಸ್ಯರಾದ ಶೀಲಾ ರಾಮಚಂದ್ರ, ಪರಮೇಶ್ ಮುಖ್ಯ ಶಿಕ್ಷಕಿರಾದ ನಂದಿನಿ,ವಾಣಿ, ಪುಷ್ಪಲತಾ, ಕಾಮಾಕ್ಷಿ,ಶಾಲಾ ಅಭಿವೃದ್ಧಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೂವಣ್ಣ,ಮಂಜುನಾಥ,ವಳಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಅಧ್ಯಕ್ಷರಾದ ಪ್ರವೀಣ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *