
ಬೆಂಗಳೂರಲ್ಲಿ ಸಿಲಿಂಡರ್‌ಗೆ 1105 ರೂ. ಇದ್ದರೆ, ದಿಲ್ಲಿಯಲ್ಲಿ 1103 ರೂ. ಇದೆ. 2020 ಮೇ ತಿಂಗಳಿಗೆ ಹೋಲಿಸಿದರೆ, ಸಿಲಿಂಡರ್ ಬೆಲೆಯಲ್ಲಿ ದುಪ್ಪಟ್ಟು ಎಂದು ಹೇಳಬಹುದು. ಈಗ ಬೆಲೆ ಇಳಿಕೆ ಮಾಡಿರುವುದರಿಂದ ತುಸು ಹೊರೆ ತಪ್ಪಲಿದೆ.
200 ರೂ. ಇಳಿಕೆ ಮಾಡಿದ್ದರಿಂದ ಬೆಂಗಳೂರು ಮತ್ತು ದಿಲ್ಲಿಯಲ್ಲಿ ಆಲೋಸ್ಟ್ ಸಿಲಿಂಡರ್ ಬೆಲೆ 903 ರೂ. ಆಗಲಿದೆ.
ಇದೇ ವೇಳೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ, ಪ್ರತಿ ಸಿಲಿಂಡರ್ ಸಬ್ಸಿಡಿಯ ಜತೆಗೆ ಈಗಿನ ಬೆಲೆ ಇಳಿಕೆಯನ್ನು ಪರಿಗಣಿಸಿದರೆ 703 ರೂ. ಬೆಲೆ ಇರಲಿದೆ.ಇದಲ್ಲದೆ, ಸರ್ಕಾರವು ಹೆಚ್ಚುವರಿ 75 ಲಕ್ಷ ಉಜ್ವಲ ಸಂಪರ್ಕಗಳನ್ನು ಘೋಷಿಸಿದ್ದು, ಒಟ್ಟು ಉಜ್ವಲ ಯೋಜನೆಯ ಫಲಾನುಭವಿಗಳನ್ನು 10.35 ಕೋಟಿಗೆ ಏರಿಕೆಯಾಗಲಿದೆ. ಸದ್ಯ ಉಜ್ವಲ ಫಲಾನುಭವಿಗಳ ಸಂಖ್ಯೆ 9.6 ಕೋಟಿ ಇದ್ದರೆ, ಸಾಮಾನ್ಯ 31 ಕೋಟಿ ಗೃಹಬಳಕೆಯ ಅಡುಗೆ ಅನಿಲ ಬಳಕೆದಾರರಿದ್ದಾರೆ.
14.2 ಕೆಜಿ ಸಿಲಿಂಡರ್‌ಗೆ ಯಾವ ನಗರದಲ್ಲಿ ಎಷ್ಟು ಬೆಲೆ?ದಿಲ್ಲಿ 903 ರೂ., ಮುಂಬೈ 902.5 ರೂ., ಕೋಲ್ಕೊತಾ 929 ರೂ., ಚೆನ್ನೈ 908.5 ರೂ., ಬೆಂಗಳೂರು 905.5 ರೂ., ಅಹ್ಮದಾಬಾದ್ 910 ರೂ., ಪಟನಾ 1001 ರೂ., ಭೋಪಾಲ್ 908.5 ರೂ., ಜೈಪುರ 906.5 ರೂ. ಮತ್ತು ಲಕ್ನೋದಲ್ಲಿ 940.5 ರೂ. ಇರಲಿದೆ.