ಸಕಲೇಶಪುರ :-ಗಾಯಗೊಂಡ ಕಾಡಾನೆ ಭೀಮನಿಗೆ ಚಿಕಿತ್ಸೆಯನ್ನ ಕೊಡುವ ಕಾರ್ಯಾಚರಣೆಯಲ್ಲಿ, ಅರವಳಿಕೆ ತಜ್ಞರಾದಂತಹ ವೆಂಕಟೇಶ್ ರವರು ಕಾಡಾನೆ ಭೀಮನ ಹಠಾತ್ ದಾಳಿಗೆ ಸಾವನ್ನಪ್ಪಿರುವುದು ಅತ್ಯಂತ ದುಃಖಕರ ವಿಚಾರ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಎಂದು ತೀರ್ಥಾನಂದ (ಕೀರ್ತಿ )ತೀವ್ರ ಸಂತಾಪವನ್ನು ವ್ಯಕ್ತಪಡಿಸಿದರು.
ನಮ್ಮ ಈ ಮಲೆನಾಡಿನ ಭಾಗದಲ್ಲಿ ಕಾಡಾನೆ ಸಮಸ್ಯೆ ಪ್ರತಿದಿನ ಎದುರಿಸುವ ಜ್ವಲಂತ ಸಮಸ್ಯೆಯಾಗಿದೆ. ಪ್ರತಿ ಬಾರಿಯೂ ಕಾಡಾನೆಗಳಿಂದ ರೈತರ ಬೆಳೆ ಹಾಗೂ ಪ್ರಾಣಗಳಿಗೆ ಹಾನಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದರೂ ಕೂಡ ಮಾನವ ಮತ್ತು ಕಾಡಾನೆ ಸಂಘರ್ಷಕ್ಕೆ ಈ ಭಾಗದಲ್ಲಿ ಶಾಶ್ವತ ಪರಿಹಾರಕ್ಕೆ ಇನ್ನು ಮುಂದಾಗದಿರುವುದು ವಿಪರ್ಯಾಸವೇ ಸರಿ. ಪ್ರತಿ ಬಾರಿಯೂ ಕೂಲಿ ಕಾರ್ಮಿಕರು ಜನಸಾಮಾನ್ಯರು ಕಾಡಾನೆ ದಾಳಿಗೆ ಸಾವನ್ನತ್ತಿದ್ದರೆ .
ಈ ಬಾರಿ ಒಬ್ಬ ನುರಿತ ಅರಾವಳಿಕೆಯ ತಜ್ಞ ಬಲಿಯಾಗಿರುವುದು ಕಾರ್ಯಾಚರಣೆಯ ಮುಂಜಾಗ್ರತಾ ಕಮ ಕೈಗೊಳ್ಳದೆ ಇರುವುದು ಇದಕ್ಕೆಲ್ಲ ಕಾರಣ ಇರಬಾವುದು. ದಯಮಾಡಿ ಸರ್ಕಾರವು ಇನ್ನಾದರೂ ನಮ್ಮ ಭಾಗದ ಕಾಡಾನೆ ಹಾಗೂ ಮಾನವ ಸಂಘರ್ಷಕ್ಕೆ ಸರ್ಕಾರದ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿ ಶಾಶ್ವತ ಪರಿಹಾರಕ್ಕೆ ಮುಂದಾಗಲಿ. ಈ ಕಾರ್ಯಾಚರಣೆಯಲ್ಲಿ ವೆಂಕಟೇಶ್ ಅವರ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಎಲ್ಲಾ ಶಕ್ತಿಯನ್ನು ಕೊಡಲಿ ಹಾಗೂ ಸರ್ಕಾರವು ಅವರ ಜೊತೆಗೆ ಬೆನ್ನೆಲುಬಾಗಿರಲಿ. ಕಾಮನಹಳ್ಳಿ ತೀರ್ಥಾನಂದ (ಕೀರ್ತಿ )