ಹಾಸನ : “ಪ್ರಕೃತಿಯ ಶತ್ರು ,ಆರೋಗ್ಯದ ಧ್ವಂಸಕ” -ಪಾರ್ಥೇನಿಯಂ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ವಿದ್ಯಾರ್ಥಿಗಳಿಂದ ಸಣ್ಣ ಚಾಕನಹಳ್ಳಿ ಹಾಗೂ ದೊಡ್ಡ ಚಾಕನಹಳ್ಳಿ ಪಾಥೇನಿಯಂ ನಿರ್ಮೂಲನೆ ಕುರಿತು ಕಾರ್ಯಕ್ರಮವನ್ನು ಆಯೋಜಿಸಿದ್ದು .ಕಾರ್ಯಕ್ರಮವನ್ನು ಅಂತಿಮ ವರ್ಷದ ಬಿ.ಎಸ್ಸಿ (ಆನ್ಸ) ಕೃಷಿ ವಿದ್ಯಾರ್ಥಿಯಾದ ಭುವನ್ ಚಂದ್ರ ಅವರ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪಾಥೇನಿಯಂ ಅನುಕೂಲ ಮತ್ತು ಅನಾನುಕೂಲವನ್ನು ತಿಳಿಸಿಕೊಟ್ಟರು. ಪಾಥೇನಿಯಂ ಒಂದು ಅಪಾಯಕಾರಿ ಕಸಪುಷ್ಟ ಗಿಡವಾಗಿದ್ದು ಇದನ್ನು ನಿರ್ಮೂಲನೆ ಮಾಡುವುದು ಅತ್ಯಂತ ಅಗತ್ಯ ಏಕೆಂದರೆ ಇದು ಮಾನವ ಆರೋಗ್ಯ ,ಪಶುಪಾಲನೆ ಹಾಗೂ ಕೃಷಿಗೆ ಹಾನಿ ಉಂಟುಮಾಡುತ್ತದೆ ಮತ್ತು ಪಾರ್ಥೇನಿಯಂನನು ಹಸಿರು ಸಸ್ಯಗೊಬ್ಬರ ಮತ್ತು ಜೈವಿಕ ಕೀಟನಾಶಕವಾಗಿ ಉಪಯೋಗಿಸಬಹುದು ಹಾಗೂ ಇದರಿಂದ ಬಯೋಗ್ಯಾಸ್ ಉತ್ಪಾದನೆಗೂ ಕೂಡ ಮಾಡಬಹುದು. ಈ ಮೂಲಕ ರೈತರೊಡನೆ ಉತ್ತಮ ಸಂವಾದದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *