
ಸಕಲೇಶಪುರ : ವಿದ್ಯಾನಿಧಿ ಆಂಗ್ಲ ಮಾಧ್ಯಮ ಶಾಲೆ ಹಾನುಬಾಳು ನಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೆಫ್ಟಿನೆಂಟ್ ಜನರಲ್ ಸಿಎಸ್ .ಜಯರಾಮ್ ಅವರು ಭಾಗವಹಿಸಿದ್ದರು
ಕಾಲೇಜ್ ಬೆಂಗಳೂರು ಮತ್ತು ಯುವರಾಜ್. ಸಿಆರ್ ಮಾಜಿ ಅಧ್ಯಕ್ಷರು ರೋಟರಿ ಸಂಸ್ಥೆ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕರು ಮತ್ತು ಎಸ್ ಡಿ ಎಮ್ ಸಿ ಸದಸ್ಯರು ಮಕ್ಕಳು ಉಪಾಸ್ಥಿತರಿದ್ದರು ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಶಿವಪ್ಪಗೌಡ ಮತ್ತು ಕಮಲಮ್ಮ ಅವರ ಪುತ್ರ ಲೆಫ್ಟಿನೆಂಟ್ ಕರ್ನಲ್ ಸಿಎಸ್. ಜಯರಾಮ್, ಅವರು ಸುದೀರ್ಘ 35 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೋಮವಾರ ಮಧ್ಯ ಪ್ರದೇಶದ ಜಬ್ಬಲ್ಪುರ ದಲ್ಲಿರುವ ಮಧ್ಯ ಭಾರತ ಮುಖ್ಯ ಆಲಯದಲ್ಲಿ ನಿವೃತ್ತಿ ಹೊಂದಿದ್ದು ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂಧೂರದಲ್ಲಿ ಮುಖ್ಯ ಪಾತ್ರ ವಹಿಸಿ ಜಯರಾಮ್ ಅವರಿಗೆ ಕೇಂದ್ರ ಸರ್ಕಾರ ಇವರ ಕರ್ತವ್ಯ ನಿಷ್ಠೆ ಪರಿಗಣಿಸಿ ಇನ್ನೂ ನಾಲ್ಕು ವರ್ಷಗಳ ದೇಶ ಸೇವೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ.
ಇವರು ಗ್ರಾಮೀಣ ಮಟ್ಟದಲ್ಲಿ ಅವರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ ಹಾನುಬಾಳು, ಹಾಸನ, ಚಿಕ್ಕಮಂಗಳೂರು, ಮತ್ತು ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗವನ್ನು ಮಾಡಿರುತ್ತಾರೆ. ಕಾರ್ಗಿಲ್ ಯುದ್ಧ ಸಮಯದಲ್ಲಿ ಯಾವುದೇ ಆಧುನಿಕ ಶಸ್ತ್ರಾಸ್ತ್ರಗಳಿಲ್ಲದಿದ್ದರೂ ಅತ್ಯಂತ ಕಠಿಣ ಪ್ರದೇಶವಾದ ಕಾರ್ಗಿಲ್ ಎಲ್ಲಾ ಪ್ರದೇಶಗಳನ್ನು ಭಾರತೀಯ ಸೇನೆ ಮರುವ ವಶಪಡಿಸಿಕೊಂಡಿದ್ದು ವಿಶ್ವದಲ್ಲಿ ನಡೆದ ಎಲ್ಲಾ ಯುದ್ಧಗಳಲ್ಲಿ ಇದು ಕಠಿಣ ಯುದ್ಧವಾಗಿತ್ತು ಮತ್ತು ಆಪರೇಷನ್ ಸಿಂಧೂರ್ ಸಮಯದಲ್ಲಿ ಅತ್ಯಾಧುನಿಕ ಶತ್ರುಗಳನ್ನು ಬಳಸಿ ಶತ್ರು ದೇಶದ ಗಡಿಯನ್ನು ದಾಟದೆ ಭಾರತದಲ್ಲಿ ಇದ್ದುಕೊಂಡು ಉಗ್ರರ ಎಲ್ಲಾ ಅಡಗು ತಾಣಗಳನ್ನು ಧ್ವಂಸಗೊಳಿಸಿ ದಲ್ಲದೆ ನೂರಾರು ಜನ ಉಗ್ರರನ್ನು ಕೇವಲ 23 ನಿಮಿಷಗಳಲ್ಲಿ ಸದೆಬಡಿಯಲಾಯಿತು ಎಂಬ ಹೆಮ್ಮೆಯ ನಮ್ಮ ಭಾರತ ದೇಶದ ಸೈನ್ಯಕ್ಕೆ ಸಲ್ಲುತ್ತದೆ ಮತ್ತು ಈ ಎರಡು ಯುದ್ಧಗಳಲ್ಲಿ ಜಯರಾಮ್ ಅವರು ಮುಖ್ಯ ಪಾತ್ರ ವಹಿಸಿದ್ದರ ಬಗ್ಗೆ ನಮ್ಮೊಂದಿಗೆ ಅವರ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು



