ಸಕಲೇಶಪುರ : ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಕುಶಾಲನಗರ ಬಡಾವಣೆಯಿಂದ ವ್ಯಕ್ತಿಯೋರ್ವ ಗೋಮಾಂಸವನ್ನು ಪ್ಯಾಕೆಟ್ ಮಾಡಿ ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದಿದ್ದ, ಬಜರಂಗದಳ ಕಾರ್ಯಕರ್ತರು ಪೋಲಿಸರಿಗೆ ಮಾಹಿತಿ ನೀಡಿದ್ದು ವ್ಯಕ್ತಿಯೋರ್ವನನ್ನು ಪೊಲೀಸ್ ಬೆನ್ನಟ್ಟಿ ಹಿಡಿದಿದ್ದು ವ್ಯಕ್ತಿಯ ಬಳಿ ಪ್ಯಾಕೆಟ್ ಮಾಡಿಟ್ಟಿದ್ದ ಗೋಮಾಂಸ ಸಿಕ್ಕಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಕೇವಲ ಒಬ್ಬನ ಮೇಲೆ ಮಾತ್ರ ಎಫ್ಐಆರ್ ಮಾಡಲಾಗಿದೆ. ಆತನಿಗೆ ಮಾಂಸ ಕೊಟ್ಟವರು ಯಾರು ಅದರ ಮೂಲ ಪೋಲಿಸರು ಕಂಡುಹಿಡಿಯುತ್ತಿಲ್ಲ ಎಂದು ಸಕಲೇಶಪುರ ಬಜರಂಗದಳ ಆರೋಪಿಸಿದೆ.

ಗೋ ಹಂತಕರಿಗೆ ಪೋಲಿಸರು ಮೇಲೆ ಭಯವೇ ಇಲ್ಲದೆ ರಾಜಾರೋಷವಾಗಿ ಕುಶಾಲನಗರ ಬಡಾವಣೆಯ ಕೆಲ ಮನೆಗಳನ್ನೇ ಕಸಾಯಿಖಾನೆ ಮಾಡಿಕೊಂಡು ಗೋವಧೆ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸುವುದಾಗಿ ಬಜರಂಗದಳ ಪ್ರಮುಖರು ತಿಳಿಸಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed