
*ಗ್ರಾಮೀಣ ಸಹಭಾಗಿತ್ವ ಅಧ್ಯಯನ* ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮ ಪಂಚಾಯಿತಿಯ ಚಿಕ್ಕಯರಗನಾಳು ಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯ ಹಾಸನದ ವಿದ್ಯಾರ್ಥಿಗಳು ದಿನಾಂಕ 25.10.2023 ರಂದು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ “ಅವಲೋಕನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಸಹಭಾಗಿತ್ವ ಅಧ್ಯಯನದ ವಿವಿಧ ಮಾದರಿಗಳನ್ನು ಅಂದರೆ ಹಳ್ಳಿಯ ನಕ್ಷೆ ,ಚಪಾತಿ ನಕ್ಷೆ, ಶ್ರೇಣಿ ಪದ್ಧತಿ,ಋತುಮಾನ ನಕ್ಷೆ, ಜಾನುವಾರುಗಳ ಗೋಪುರ, ಸಮಯವಾರು ನಕ್ಷೆ , ಚಲನವಲನ ನಕ್ಷೆ ,ಸಮಸ್ಯೆ ಮತ್ತು ಪರಿಹಾರ ವೃಕ್ಷ ಎಲ್ಲವನ್ನೂ ಬಳಸಿ ಹಳ್ಳಿಯಲ್ಲಿರುವ ಸಂಪನ್ಮೂಲಗಳನ್ನು ರೈತರಿಂದಲೇ ತಿಳಿದುಕೊಂಡರು.
ಹಾಗೆಯೇ ಕೃಷಿಗೆ ಸಂಬಂಧಿಸಿದ ಹಲವು ತೊಂದರೆಗಳು ಹಾಗೂ ಅವರಿಗೆ ಬೇರೆ ಬೇರೆ ಕಸುಬುಗಳಲ್ಲಿರುವ ಆಸಕ್ತಿ ಮತ್ತು ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಹೋಗಬೇಕಿರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಳ್ಳಿ ನಕ್ಷೆ ಮಾಡುವ ಮೂಲಕ ಜನರಿಗೆ ಹಳ್ಳಿಯನ್ನು ಒಂದು ಮಾದರಿಯಾಗಿ ತೋರಿಸಿ ಅವರ ಮನಗಳನ್ನು ಇಡುವ ಮೂಲಕ ಅವರಲ್ಲಿ ಖುಷಿಯ ವಾತಾವರಣವನ್ನು ಸೃಷ್ಟಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಕುರಿತು ಮಾತನಾಡಿದ ಕೃಷಿ ಮಹಾವಿದ್ಯಾಲಯದ ಡೀನ್ ರವರಾದ ವಾಸುದೇವನ್ ರವರು ಕೃಷಿಯ ಬಗ್ಗೆ ಆಧುನಿಕ ಮಾಹಿತಿಯನ್ನು ಹಾಗೂ ಹೊಸದಾಗಿ ಬಂದಿರುವಂತಹ ವಿವಿಧ ಬೆಳೆಯ ತಳಿಗಳ ಬಗ್ಗೆ ಅರಿತುಕೊಂಡು ಮುಂದಿನ ದಿನಗಳಲ್ಲಿ ಹೊಸ ಬಗೆಯ ತಳಿಗಳನ್ನು ಬಳಸಲು ರೈತರಿಗೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಅಧ್ಯಾಪಕರುಗಳಾದ ಡಾ. ಶಂಕರ ಎಂ ಎಚ್, ಡಾ. ಶಶಿ ಕಿರಣ್ ಎ ಎಸ್, ಡಾ. ನವೀನ್ ಕುಮಾರ್ ಪಿ ಹಾಗೂ ಡಾ. ಸದಾಶಿವನಗೌಡ ಎಸ್ ಎನ್ ಓ ಉಪಸ್ಥಿತರಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಹಳ್ಳಿಯ ಪ್ರಮುಖ ಮುಖಂಡರುಗಳಾದ ಮಧುಸೂದನ್ ,ಶಾಂತರಾಜು ಕಾಂತರಾಜು,ರಾಮೇಗೌಡ ಹಾಗೂ ಇತರ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.