
ಹಿರಿಸಮುದ್ರ ಗ್ರಾಮದಲ್ಲಿ e – KYC ಅರಿವು RAWEP ಕೃಷಿ ವಿಧ್ಯಾರ್ಥಿಗಳು ಹಿರಿಸಮುದ್ರ ಗ್ರಾಮದಲ್ಲಿ, ಸಂಜೆ ರೈತರನ್ನು ಒಗ್ಗೂಡಿಸಿ ಪಿ. ಎಮ್. ಕಿಸಾನ್ ಸಮ್ಮನ್ ನಿಧಿ e -KYC ಮಾಡುವ ವಿಧಾನದ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು .
ಈ ಕಾರ್ಯಕ್ರಮದಲ್ಲಿ ರೈತರು ತಮ್ಮ ಮೊಬೈಲ್ ಮೂಲಕ ಹೇಗೆ e -KYC ಮಾಡಿಕೊಳ್ಳುವುದು ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಹಾಜರಿದ್ದ ರೈತರ ಆಧಾರ್ ನಂಬರ್ ಅನ್ನು ಪರಿಶೀಲಿಸಿ e -KYC ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಂಡರು .
ಒಂದು ವೇಳೆ ಆಗದಿದ್ದಲ್ಲಿ ಅದನ್ನು ಮಾಡುವ ವಿಧಾನವನ್ನು ತಿಳಿಸಿಕೊಟ್ಟರು.
ಹಾಗು ಮುಂದಿನ ಕಂತಿನ ಹಣ ಬರಬೇಕಾದರೆ e -KYC ಕಡ್ಡಾಯವಾಗಿ ಮಾಡಲೇಬೇಕೆಂಬ ಜಾಗೃತಿ ಮೂಡಿಸಿದರು.