ಸಕಲೇಶಪುರ : ಇಂದು ಭಾರತೀಯ ಕಾಫಿ ಮಂಡಳಿಯ ನೂತನ ಅಧ್ಯಕ್ಷರಾದ ಭಾರತೀಯ ಜನತಾ ಪಾರ್ಟಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು , ಕೃಷಿಕ ಪತ್ರಿಕೆಯ ಸಂಪಾದಕರು ಮತ್ತು ಕಾಫಿ ಬೆಳೆಗಾರರಾದ ಎಂ ಜೆ ದಿನೇಶ್ ದೇವರುಂದ ಇವರನ್ನು ಸಕಲೇಶಪುರ ಮಂಡಲದ ಅಧ್ಯಕ್ಷರಾದ ಮಂಜುನಾಥ್ ಸಂಘಿ ಅವರ ನೇತೃತ್ವದಲ್ಲಿ ದೇವಾಲದಕೆರೆ ಶಕ್ತಿ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಿಕೆ ಭರತ್ ಮಂಡಲ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ, ಹೃಷಿಕೇಶ್ ಮಂದಾರ ಉಪಾಧ್ಯಕ್ಷರಾದ ಅರುಣ್ ಅಚ್ಚನಹಳ್ಳಿ ಹಾನುಬಾಳು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಅನಿಲ್ ಸಂಪಗೂಡು ಮುಖಂಡರಾದ ಸುನಿಲ್ ದೇವಾಲದಕೆರೆ, ಅಭಿಷೇಕ್, ಕುಮಾರಹಳ್ಳಿ,ಲೋಕೇಶ್ ಮಗಜಹಳ್ಳಿ ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed