![](https://tv46malenadudigital.com/wp-content/uploads/2023/10/IMG-20231029-WA0016-1024x565.jpg)
ಕೇರಳದ ಎರ್ನಾಕುಲಂ ಕಲಮಸ್ಸೆರಿಯ ಕ್ರಿಶ್ಚಿಯನ್ ಗ್ರೂಪ್ ಕನ್ವೆನ್ಷನ್ ಕೇಂದ್ರದಲ್ಲಿ ಅನುಮಾನಸ್ಪದ ಸ್ಪೋಟವೊಂದು ಭಾನುವಾರ ಸಂಭವಿಸಿದೆ.
ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಮತ್ತು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಸ್ಪೋಟಕ್ಕೆ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. “ನಮಗೆ ಸ್ಪೋಟದ ಕುರಿತು 9 ಗಂಟೆ ಆಸುಪಾಸಿನಲ್ಲಿ ಕರೆ ಬಂದಿತ್ತು” ಎಂದು ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ಪಿಟಿಐ ಉಲ್ಲೇಖಿಸಿದೆ. “ಸ್ಥಳದಲ್ಲಿ ಹಲವು ಬಾರಿ ಸ್ಪೋಟ ಕೇಳಿಸಿದೆ” ಎಂದು ಸ್ಥಳೀಯರು ಹೇಳಿದ್ದಾರೆ.