ಸಕಲೇಶಪುರ : ಪುರಸಭೆಯ ಏಳನೇ ವಾರ್ಡಿನ ಸದಸ್ಯರಾದ ದಿ.ಜರಿನಾ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಪೊಲಿಸ್ ಬಿಗಿಬಂದುಬಸ್ತ್ ನೊಂದಿಗೆ ಮತದಾನ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಮತದಾನ ಕೇಂದ್ರಕ್ಕೆ ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್,ಕಾಂಗ್ರೆಸ್ ತಾಲೂಕು ಅಧ್ಯಕ್ಷ ಬೈರಮುಡಿ ಚಂದ್ರು ಅವರು ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿಯಾದ ರೇಷ್ಮಾಬಾನು ಅವರ ಪರವಾಗಿ ಮತ ಹಾಕುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿಕಾಂಗ್ರೆಸ್ ಮುಖಂಡರಾದ ,ಕೊಲ್ಲಹಳ್ಳಿ ಸಲೀಂ, ಪುರಸಭೆ ಮಾಜಿ ಅದ್ಯಕ್ಷ ಸೈಯದ್ ಮುಫೀಜ್, ಸದಸ್ಯ ಅಣ್ಣಪ್ಪ, ವಿಜಯ್ ಕುಮಾರ್, ಜಾಕೀರ್,ಆಚಂಗಿ ಸುಲೇಮಾನ್,ಇತರರು ಇದ್ದರು.