ಅರಸೀಕೆರೆ : ತಾಲೂಕು, ಗಂಡಸಿ ಹೋಬಳಿ, ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕೃಷಿ ಮಹಾವಿದ್ಯಾಲಯ, ಕಾರೆಕೆರೆ, ಹಾಸನದ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ 2023-24 ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ಹಾಗೂ ಕೃಷಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಪೋಷಣ ಖಾದ್ಯಗಳು ಮತ್ತು ಸಾಮಾನ್ಯ ಅಡಿಗೆ ನೈರ್ಮಲ್ಯ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ಮೂಡಿ ಬಂತು.

ಸರಿಸುಮಾರು 50 ಜನರು ಸೇರಿದ್ದ ಕಾರ್ಯಕ್ರಮವು ಇದು. ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಪೋಷಣ ಖಾದ್ಯಗಳು ( ಆಹಾರ ಅಥವಾ ಆಹಾರದ ಭಾಗ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ ), ಈ ಪೋಷಣ ಖಾದ್ಯಗಳು ಮಾಡುವ ಕೆಲಸಗಳಾದ ಪೌಷ್ಟಿಕಾಂಶದ ಬೆಂಬಲ, ಚಯಾಪಚಯ ಪ್ರಕ್ರಿಯೆಯನ್ನು ಸುಧಾರಿಸುವುದು, ಶರೀರದ ಅಸಮತೋಲನವನ್ನು ಸರಿಪಡಿಸುವುದು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಲಾಯಿತು.

ಈ ಖಾದ್ಯಗಳ ವರ್ಗಿಕರಣವನ್ನು ಚಿತ್ರದ ಮೂಲಕ ಹೇಳಲಾಯಿತು. ಇದಲ್ಲದೆ ಈ ಪೋಷಣ ಖಾದ್ಯಗಳಲ್ಲಿ ಒಂದಾದ ನಿರ್ವಿಶೀಕರಣದ ಪಾನಿಯ ಒ. ಜಿ.ಸಿ.( ಆರೆಂಜ್, ಜಿಂಜರ್, ಕ್ಯಾರಟ್) ಯನ್ನು ವಿದ್ಯಾರ್ಥಿಗಳೇ ತಯಾರಿಸಿ ಎಲ್ಲಾ ಗ್ರಾಮಸ್ಥರಿಗೂ ನೀಡಿ, ರಂಗಪ್ಪ ಎಂಬ ರೈತರಿಂದ ಅವರ ಅನಿಸಿಕೆಗಳನ್ನು ತಿಳಿದುಕೊಳ್ಳಲಾಯಿತು.

ಇದಲ್ಲದೆ ಸಾಮಾನ್ಯ ಅಡುಗೆ ನೈರ್ಮಲ್ಯಗಳಾದ ಕೈಗಳನ್ನು ತೊಳೆಯುವುದು, ಆಹಾರವನ್ನು ಸಂಪೂರ್ಣವಾಗಿ ಬೇಯಿಸುವುದು, ಅಡ್ಡ ಮಾಲಿನ್ಯವನ್ನು ತಪ್ಪಿಸುವುದನ್ನು ಸಂಕ್ಷಿಪ್ತವಾಗಿ ಹೇಳಲಾಯಿತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಶಶಿಕುಮಾರ್ ಜೆ.ಎನ್. ಸಹಾಯಕ ಪ್ರಾಧ್ಯಾಪಕರು, ಆಹಾರ ಸಂಸ್ಕರಣ ತಂತ್ರಜ್ಞಾನ ವಿಭಾಗ,ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *