ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಹಾಸನ, ಸಿ.ಹೆಚ್ ಚರಣ್ ಸಿಂಗ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ,ರಾಜಸ್ಥಾನ ಇವರ ವತಿಯಿಂದ ‘ತೆಂಗಿನ ಮರ ಹತ್ತುವ ಮೂಲಕ ಗ್ರಾಮೀಣ ಯುವ ರೈತರ ಉದ್ಯೋಗಿಕರಣ’ ತರಬೇತಿ ಕಾರ್ಯಕ್ರಮವನ್ನು ದಿನಾಂಕ 21 ರಿಂದ 23 ಡಿಸೆಂಬರ್ 2023 ರವರೆಗೆ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ದೊಡ್ಡಯರಗನಾಳು ಗ್ರಾಮದಲ್ಲಿ ಆಯೋಜಿಸಲಾಯಿತು.
ಮೂರು ದಿನಗಳ ಈ ಕಾರ್ಯಕ್ರಮವನ್ನು ಡಾ. ಎಸ್ ಎನ್ ವಾಸುದೇವನ್ ಡೀನ್( ಕೃಷಿ), ಕೃಷಿ ಮಹಾವಿದ್ಯಾಲಯ ಹಾಸನ ಇವರು ಉದ್ಘಾಟಿಸಿದರು ಹಾಗೂ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕರಾದ ಡಾ. ಶಂಕರ ಎಮ್ ಹೆಚ್ ರವರು ಉಪಸ್ಥಿತರಿದ್ದರು.
ದಿನಾಂಕ 21 ರಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕರುಗಳಾದ ಡಾ.ಭಾರತಿ ಸಿ ಮಿರಾಜಕರ ರವರು ತೆಂಗಿನ ಮೌಲ್ಯವರ್ಧಿಕ ಉತ್ಪನ್ನಗಳ ಬಗ್ಗೆ ತಿಳಿಸಿದರು ಹಾಗು ಡಾ.ಮಂಜುನಾಥ ಹೆಚ್ ರವರು ತೆಂಗಿನ ರೋಗಗಳು ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ದಿನಾಂಕ 22 ರಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳಾದ ಡಾ. ಬಿ ಎಸ್ ಬಸವರಾಜು ರವರು ತೆಂಗಿನಲ್ಲಿ ಕೀಟಗಳ ಸಮಗ್ರ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು ,
ಡಾ.ನಟರಾಜ ರವರು ತೆಂಗಿನ ನರ್ಸರಿ ನಿರ್ವಹಣೆ ಹಾಗೂ ಉತ್ಪಾದನಾ ತಂತ್ರಜ್ಞಾನಗಳ ಬಗ್ಗೆ ತಿಳಿಸಿದರು ಹಾಗೂ ಡಾ. ರೇಖಾ ಬಿ ರವರು ತೆಂಗಿನ ಸುಳಿ ಸ್ವಚ್ಛಗೊಳಿಸುವಿಕೆ ಹಾಗೂ ಪೋಷಕಾಂಶ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ಈ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿದಾರರಾದ ರಾಮನಾಯಕ್ ರವರು ರೈತರಿಗೆ ತೆಂಗಿನ ಮರ ಹತ್ತುವ ಸಂಪೂರ್ಣ ತರಬೇತಿಯನ್ನು ನೀಡಿದರು.
ತರಬೇತಿ ಅಂತಿಮದಲ್ಲಿ ಹಾಜರಿದ್ದ ಎಲ್ಲ ರೈತರಿಗೂ ಪ್ರಮಾಣ ಪತ್ರ ಹಾಗೂ ಬಕೆಟ್ ಬಲೆಗಳನ್ನು ನೀಡಲಾಯಿತು.