ಚಗಚಗೆರೆ ಗ್ರಾಮದಲ್ಲಿ ಕೃಷಿ ಕಾರ್ಯನುಭವ ಶಿಬಿರದ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಹಾಲು ಸಂಸ್ಕರಣೆ ಮತ್ತು ಅದರ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಇತ್ತೀಚ್ಚಿಗೆ ಜನರಿಗಿರುವ ಹಾಲು ಉತ್ಪನ್ನಗಳ ಮೇಲಿನ ಗೊಂದಲಗಳಿಗೆ ಸ್ಪಷ್ಟ ಮಾಹಿತಿ ನೀಡಲಾಯಿತು ಮತ್ತು ಸ್ವಚ್ಛ ಹಾಲು ಉತ್ಪಾದನೆ ಮಾಡುವುದು ಹೇಗೆ? ಅದರ ಸಂಸ್ಕರಣೆ ಹೇಗೆ? ಅದರ ಮೌಲ್ಯವರ್ಧಿತ ಉತ್ಪನ್ನಗಳಾವವು? ಮತ್ತು ಅದರ ಮಾರುಕಟ್ಟೆ ಹೇಗೆ ಎಂಬ ಜನರ ಹತ್ತು-ಹಲವು ಪ್ರಶ್ನೆಗಳಿಗೆ ವಿಸ್ತಾರವಾಗಿ ಸ್ಪಷ್ಟ ಉತ್ತರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಕಾಲೇಜಿನ ಆಹಾರ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಶ್ವನಾಥ್ ಅಂಗಡಿ ಅವರು ಹಾಗೂ ಊರಿನ ಹಿರಿಯರು, ಮುಖಂಡರು, ಯುವಕರು ,ಹಾಗೂ ಕೃಷಿ ಕಾಲೇಜಿನ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ಮತ್ತು ಕೃಷಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.