ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ವಾಣಿಜ್ಯೋದ್ಯಮ ಯೋಜನೆಗಳು’ ಕುರಿತಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಭಾಗವಾಗಿ ರೈತರು ಸ್ವಾವಲಂಬಿ ಜೀವನ ವನ್ನು ನಡೆಸಬಹುದು ಎಂದು ಮಾಹಿತಿ ನೀಡಿದರು. ನಂತರ ಗ್ರಾಮದಲ್ಲಿ ಪ್ರಮುಖ ಬೆಲೆಯಾದ ರಾಗಿ ಮತ್ತು ತೆಂಗಿನ ಕಾಯಿಯನ್ನ ಬಳಸಿಕೊಂಡು ಸಂಸ್ಕರಣಾ ಘಟಕ ಮತ್ತು ಮೌಲ್ಯ ವರ್ಧನೆ ಘಟಕಗಳನ್ನು ಸ್ಥಾಪಿಸಬಹುದು ಎಂದು ಮಾಹಿತಿ ನೀಡಿದರು.

ಇದಲ್ಲದೆ ಸರ್ಕಾರಿ ಯೋಜನೆಗಳಾದ ಮುದ್ರ ಯೋಜನೆ, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ(ಪಿ.ಎಂ.ಎಫ್.ಎಂ.ಇ)ಯೋಜನೆ , ಭಾರತೀಯ ಸ್ಟಾರ್ಟಪ್‌ಗಳನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಭಾರತ ಸರ್ಕಾರವು ಆರಂಭಿಸಿದ ಯೋಜನೆಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಯಾದ ಚರಣ್ ಕುಮಾರ್ . ಎಮ್ ಅವರು ತಿಳಿಸಿಕೊಟ್ಟರು.

ಈ ಕಾರ್ಯ ಕ್ರಮದಲ್ಲಿ ವಿವಿಧ ಯೋಜನೆಗಳ ವೈಶಿಷ್ಟ್ಯಗಳು, ಅರ್ಹತೆ,ನಿಯಮಗಳು, ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು ಮುಂತಾದವುಗಳ ಬಗ್ಗೆ ಸವಿವರವಾಗಿ ರೈತರೊಂದಿಗೆ ಚರ್ಚಿಸಲಾಯಿತು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *