
ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಮಹಿಳೆ ಮತ್ತು ಮಕ್ಕಳಲ್ಲಿ ಪೋಷಕಾಂಶಗಳ ನಿರ್ವಹಣೆʼ ಕುರಿತಾದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಗೋಪಿಕಾ ಸಿ ಮುತ್ತಗಿರವರು ಆಗಮಿಸಿದ್ದರು.
ಸುರಕ್ಷಿತ ಆಹಾರವನ್ನು ತಯಾರಿಸುವ ಐದು ಪ್ರಮುಖ ಹಂತಗಳ ಬಗ್ಗೆ ಹಾಗೂ ತಾಯಂದಿರಿಗೆ ಪ್ರಯೋಜನವಾಗುವಂತಹ ಐದು ಆಹಾರಗಳಾದ : ತೊಕ್ಕೆಗೋಧಿ – ತೊಕ್ಕೆಗೋಧಿಯಲ್ಲಿ ಬೀಟಾ-ಗ್ಲೂಕಾನ್ ಎಂದು ಕರೆಯಲಾಗುವ ಒಂದು ಬಗೆಯ ನಾರಿನ ಅಂಶವನ್ನು ಒಳಗೊಂಡಿವೆ.ಸಲ್ಮೋನ್ ಮೀನು: ಸಲ್ಮೋನ್ ನಂತಹ ಕೊಬ್ಬಿನ ಮೀನುಗಳು ಒಮೆಗಾ-3 ಕೊಬ್ಬಿನ ಆಮ್ಲಗಳಲ್ಲಿ ಸಮೃದ್ಧವಾಗಿವೆ.ಸೊಪ್ಪು:ಕ್ಯಾಲ್ಸಿಯಂ, ಕಬ್ಬಿಣನಂತಹ ಅತ್ಯಗತ್ಯವಾದ ಪೋಷಕಾಂಶಗಳು ಇರುತ್ತವೆ.ಮೊಸರು: ಕ್ಯಾಲ್ಸಿಯಂ ಮತ್ತು ಪ್ರೊಟೀನ್ ನ ಕಣಜವಾಗಿದೆ.ದ್ವಿದಳ ಧಾನ್ಯಗಳು: ಪ್ರೊಟೀನ್, ನಾರು, ಕಬ್ಬಿಣ ಮತ್ತು ಇತರ ಅಗತ್ಯ ಪೋಷಕಾಂಶಗಳ ಅತ್ಯುತ್ತಮ ಮೂಲಗಳಾಗಿವೆ.ಬೀಜಗಳಾದ ಬಾದಾಮಿ, ಗೋಡಂಬಿಯಲ್ಲಿ ಕೊಬ್ಬು, ಪ್ರೊಟೀನ್ ಮತ್ತು ಅಗತ್ಯವಾದ ಖನಿಜಗಳನ್ನು ಹೊಂದಿದೆ.ಮಹಿಳೆಯರಿಗೆ ಬೇಕಾದ ಪೌಷ್ಟಿಕ ಆಹಾರಗಳ ಬಗ್ಗೆ ವಿದ್ಯಾರ್ಥಿನಿಯಾದ ಪೂಜ ಅವರು ತಿಳಿಸಿದರು. ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಬೇಕಾದ ಆಹಾರಕ್ರಮಗಳ ಬಗ್ಗೆ ವಿದ್ಯಾರ್ಥಿನಿಯಾದ ಪ್ರಗತಿ ಅವರು ತಿಳಿಸಿಕೊಟ್ಟರು.
ನಂತರ ಸಂಪನ್ಮೂಲ ವ್ಯಕ್ತಿಗಳು ನೇರವಾಗಿ ಜನರೊಂದಿಗೆ ಚರ್ಚೆಯನ್ನು ನಡೆಸಿ ಮಹಿಳೆ ಮತ್ತು ಮಕ್ಕಳಿಗೆ ಬೇಕಾದ ಪೋಷಕಾಂಶಗಳ ಬಗ್ಗೆ ತಿಳಿಸಿಕೊಟ್ಟರು.