
ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಆಹಾರ ಸುರಕ್ಷತೆ ಮತ್ತು ಭದ್ರತೆʼ ಕುರಿತಾದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವಿಶ್ವನಾಥ ಅಂಗಡಿ ರವರು ಆಗಮಿಸಿದ್ದರು.
ಆರೋಗ್ಯ ಜೀವನಕ್ಕಾಗಿ ಆಹಾರ ಸುರಕ್ಷತೆ ಮಹತ್ವ ಹಾಗೂ ಸುರಕ್ಷಿತ ಆಹಾರ ತಯಾರಿಸುವ ವಿಧಾನಗಳ ಬಗ್ಗೆ, ಆಹಾರ ವಿಷ : ಆಹಾರ ವಿಷವು ಕಲುಷಿತ ಆಹಾರ ಅಥವಾ ನೀರಿನ ಸೇವನೆಯಿಂದ ಉಂಟಾಗುವ ಸ್ಥಿತಿಯಾಗಿದೆ.ಆಹಾರ ವಿಷದ ಹಿಂದಿನ ರೋಗಕಾರಕಗಳಾದ ಬ್ಯಾಕ್ಟೀರಿಯಾ,ವೈರಸ್, ಟಾಕ್ಸಿನ್ಸ್ ಹಾಗೂ ಹಲವಾರು ಸೂಕ್ಷ್ಮ ಜೀವಿಗಳು.ಆಹಾರ ವಿಷದ ಲಕ್ಷಣಗಳು:ವಾಕರಿಕೆ,ವಾಂತಿ,ಅತಿಸಾರ,ಹೊಟ್ಟೆ ನೋವು,ಜ್ವರ.ಆಹಾರ ವಿಷ ವಿರುದ್ಧ ರಕ್ಷಣೆಯ ಬಗ್ಗೆ ವಿದ್ಯಾರ್ಥಿನಿಯಾದ ಸೋನು.ಸಿ.ಎ ಅವರು ತಿಳಿಸಿದರು.
ಗ್ರಾಹಕರ ಹಿತರಕ್ಷಣಾ ಕಾಯ್ದೆ,ಗ್ರಾಹಕ ಹಕ್ಕುಗಳು, ಕಾಯ್ದೆಯ ಮುಖ್ಯ ಉದ್ದೇಶಗಳ ಬಗ್ಗೆ ವಿದ್ಯಾರ್ಥಿ ಯಾದ ಚರಣ್ ಕುಮಾರ್. ಎಮ್ ಅವರು ತಿಳಿಸಿಕೊಟ್ಟರು.ನಂತರ ಸಂಪನ್ಮೂಲ ವ್ಯಕ್ತಿಗಳು ನೇರವಾಗಿ ಜನರೊಂದಿಗೆ ಚರ್ಚೆಯನ್ನು ನಡೆಸಿ ಸುರಕ್ಷಿತ ಆಹಾರ ಹಾಗೂ ಗ್ರಾಹಕರ ಹಿತರಕ್ಷಣಾ ಕಾಯ್ದೆ ಬಗ್ಗೆ ಮತ್ತಷ್ಟು ವಿವರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ಸುರಕ್ಷಿತ ಆಹಾರ ತಯಾರಿಸುವ ವಿಧಾನಗಳ ಬಗ್ಗೆ ಗ್ರಾಮಸ್ಥರ ಮುಂದೆ ವಿದ್ಯಾರ್ಥಿಗಳು ಮಾಡಿದ ಸಾಕ್ಷ್ಯಚಿತ್ರ ವೀಡಿಯೊ ಮೂಲಕ ಪ್ರಸ್ತುತ ಪಡಿಸಲಾಯಿತು.
