
ಸಕಲೇಶಪುರ:- ಇಲ್ಲಿನ 67 ನೇ ದನಗಳ ಜಾತ್ರೆ ಮತ್ತು ವಸ್ತು ಪ್ರದರ್ಶನದ ಪ್ರಯುಕ್ತ ನಗರದ ಪುರಭವನದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಕೇರಂ ಪಂದ್ಯಾವಳಿಯನ್ನು ಇಪ್ಪತ್ತನೇ ವಾರ್ಡಿನ ಪುರಸಭಾ ಸದಸ್ಯರಾದ ಶ್ರೀಯುತ ಇಸ್ರಾರ್ ರವರು ಕೇರಂ ಆಡುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಆಗಮಿಸಿದ್ದರು. ಹಾಗೂ ಮಹಿಳೆಯರು ಕೂಡ ಕೇರಂ ಪಂದ್ಯಾವಳಿಯಲ್ಲಿ ಆಡಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವೆನಿಸಿತ್ತು. ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೂಡ ಹಾಜರಿದ್ದು , ತಾಲೂಕಿನ ಕ್ರೀಡಾಪಟುಗಳನ್ನು ಗುರುತಿಸಲು ಅವಕಾಶವಾಯಿತು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಇಸ್ರಾರ್, ಖ್ಯಾತ ಆಟಗಾರರಾದ ರಘು, ಜಮಿಲ್, ಪ್ರವೀಣ್, ಜಗದೀಶ್, ಇತರರು ಉಪಸ್ಥಿತರಿದ್ದರು.
