
ಸಕಲೇಶಪುರ : ಶುಕ್ರವಾರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಹಾಸನ ಭಾಗದಿಂದ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ, ಈಚಾರ್ ಲಾರಿಯನ್ನು ಪೋಲಿಸರ ಜೊತೆಯಲ್ಲಿ ರಾಮಧೂತ ಹಿಂದೂ ಮಹಾಗಣಪತಿ ಸಮಿತಿಯ ಕಾರ್ಯಕರ್ತರು ತಡೆದು ಗೋರಕ್ಷಣೆ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ Ka-46-2572 ಲಾರಿಯು ಸಾಗುತ್ತಿದ್ದ ವೇಳೆ ಅನುಮಾನಗೊಂಡು ಹಿಂಬಾಲಿಸಿದ್ದು, ರಾಷ್ಟ್ರೀಯ ಹೆದ್ದಾರಿ ಮಳಲಿ ಬೈಪಾಸ್ ಬಳಿ ಈಚಾರ್ ವಾಹನದೊಳಗೆ ಗೋವುಗಳನ್ನು ತುಂಬಿರಿವುದು ಖಚಿತ ಪಡಿಸಿಕೊಂಡ ಕಾರ್ಯಕರ್ತರು ನಗರ ಠಾಣೆಯ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಾರ್ಯಪ್ರವೃತ್ತರಾಗಿ ನಗರ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಹಿಂದೂ ಕಾರ್ಯಕರ್ತರ ಸಹಯೋಗದಲ್ಲಿ ಟೋಲ್ ಗೇಟ್ ಬೈಪಾಸ್ ರಸ್ತೆಯಲ್ಲಿ ವಾಹನ ತಡೆದಿದ್ದಾರೆ.
ವಾಹನದೊಳಗೆ ಉಸಿರು ಕಟ್ಟುವ ರೀತಿ ಟಾರ್ಪಲ್ ಬಳಿಸಿ ಮುಚ್ಚಿದ್ದು ತಕ್ಷಣ ನೋಡಿದರೆ ಅನುಮಾನ ಬಾರದೇ ತರಕಾರಿ ವಾಹನ ಎಂಬಂತೆ ಮಾರ್ಪಾಟು ಮಾಡಲಾಗಿದೆ. ಟಾರ್ಪಲ್ ತೆರೆದಾಗ 17 ಗೋವುಗಳನ್ನು ತುಂಬಲಾಗಿತ್ತು.
ಪೋಲಿಸರು ತಕ್ಷಣ ವಾಹನ – ಚಾಲಕರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಕ್ಷಿಸಿದ ಗೋವುಗಳನ್ನು ಪ್ರತ್ಯೇಕ ಇನ್ನೊಂದು ವಾಹನ ಮಾಡಿ ಬಾಣಾವರದ ಗೋಶಾಲೆಗೆ ಬಿಡಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.




