ಹೆತ್ತೂರು :-ಹೋಬಳಿಯ ಬಾಚ್ಚಿಹಳ್ಳಿ ವೃತ್ತದಲ್ಲಿರುವಂತಹ ಹೈ ಮಾಸ್ಟ್  ದೀಪ ದುರಸ್ತಿ ಮಾಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿರುವ ಹೈ ಮಾಸ್ಕ್ ದೀಪ ಕೆಟ್ಟು ಸುಮಾರು 6 ತಿಂಗಳಾಗಿದ್ದು, ಇದು ಕಳಚಿ ಬಿಳುವ ಹಂತದಲ್ಲಿದು,ಪ್ರತಿ ದಿನ ಇದರ ಸಮೀಪವೇ ಬಸ್ಸಿಗೆ ಕಾಯುತ್ತಾ ವಿದ್ಯಾರ್ಥಿಗಳು, ಸಾರ್ವಜನಿಕರು ನಿಲ್ಲುತಿದ್ದು,ಇದು ಗಾಳಿಗೆ ನೇತ್ತಾಡುತ್ತಿದ್ದು, ಮುಂದೆ ಆಗಬೇಕಾದ ಆನುಹುತ್ತಾ ತಪ್ಪಿಸಿ,ಇದಲ್ಲದೆ ಕತ್ತಲಾದರೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಕೊಡ ಇದೆ.

ಈ ಪ್ರದೇಶಕ್ಕೆ ತೀರಾ ಅನಿವಾರ್ಯತೆ ಇದ್ದುದರಿಂದ ದೀಪ ಅಳವಡಿಸಲಾಗಿತ್ತು.ಇದೀಗ ಹೈ ಮಾಸ್ಟ್ ನಂತಹ ದೀಪ ಇದ್ದರೂ ಕೂಡ   ಕತ್ತಲೆಯಂತೆ ಆಗಿದೆ.ಇದರ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಳಿಸಿದರೆ ಇದನ್ನು ಸರಿಪಡಿಸುವಷ್ಟು ಪಂಚಾಯಿತಿ ಹಣ ಇಲ್ಲ ಎಂದು ಹೇಳುತ್ತಾರೆ, ಲೋಕೋಪಯೋಗಿ ಇಂಜಿನಿಯರಿಂಗ್,ಸ್ಥಳಿಯ ಜನಪ್ರತಿನಿಧಿಗಳು ಇದರ ಮಾಹಿತಿ ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ,ಮಳೆಗಾಲ ಸಮೀಸುತ್ತಿದ್ದು ದಯಾಮಾಡಿ ನೇತಾಡುತ್ತಿರುವ ಹೈ ಮಾಸ್ಕ್ ದೀಪ ಸರಿಪಡಿಸಿ ಮುಂದೆ ಆಗುವ ಅನಾಹುತ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕೆಂದು ಗ್ರಾಮಸ್ಥ ಲೋಕೇಶ್ ಆಗ್ರಹಿಸಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *