ಕಸಬಾ ಹೋಬಳಿ ಬೆಳೆಗಾರ ಸಂಘದ ವತಿಯಿಂದ ಸಕಲೇಶಪುರ ತಾಲ್ಲೂಕು ಕಚೇರಿ ಯಲ್ಲಿ ರೈತರನ್ನು ಸತಾಯಿಸುತ್ತಿದ್ದು ರೈತರಿಗೆ ನ್ಯಾಯ ಕೊಡಿಸುವಂತೆ, ಹಾಗೂ , ಬಿ ಎಮ್ ರಸ್ತೆಯಲ್ಲಿ ವಾಹನ ದಟ್ಟಣೆ, ಪೋಡಿ ಮುಕ್ತ ಗ್ರಾಮ, ಸರ್ವೇ ಕಚೇರಿಯಲ್ಲಿನ ನ್ಯೂನತೆಗಳು, ಹಾಗೂ ಮಿನಿ ವಿಧಾನ ಸೌಧ ದಲ್ಲೇ ಕಸಬಾ ಕಂದಾಯ ಕಚೇರಿ, ಸರ್ವೇ ಕಚೇರಿ, ಸಬ್ ರಿಜಿಸ್ಟರ್ ಕಚೇರಿ ಎಲ್ಲವನ್ನು ಒಂದೇ ಕಚೇರಿಯಲ್ಲಿ ಸ್ಥಾಪನೆ ಮಾಡಬೇಕೆಂದು ಮನವಿ ಮಾಡಲಾಯಿತು .ಇದೇ ಸಂದರ್ಭದಲ್ಲಿ ನೂತನವಾಗಿ ಶಾಸಕರಾಗಿ ಆಯ್ಕೆಯಾದ ಸಿಮೆಂಟ್ ಮಂಜುರವರನ್ನು ಕಸಬಾ ಹೋಬಳಿ ಬೆಳೆಗಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು ಕಸಬಾ ತಂಡದ ಅಧ್ಯಕ್ಷ ಲೋಹಿತ್ ಕೌಡಳ್ಳಿ ಕಾರ್ಯದರ್ಶಿ ಚಂದ್ರುಶೇಖರ್, ಹಾಸನ ಜೆಲ್ಲಾ ಬೆಳೆಗಾರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಪಿ ಆರ್ ಫ್ ಮಾಜಿ ಅಧ್ಯಕ್ಷ y ಸೂಪರ್ ಗಿರೀಶ್ ಹಾಗೂ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.