
ಸಕಲೇಶಪುರ : ಸರಳ,ಸಜ್ಜನಿಕೆ ಹಾಗೂ ಪ್ರಮಾಣಿಕ ವ್ಯಕ್ತಿಗಳಿಂದ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿಹೊಂದಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಬುಧುವಾರ ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ,ರೈತರಿಂದ ರೈತರಿಗಾಗಿ ಆರಂಭವಾಗಿದ್ದೆ ಸಹಕಾರ ಸಂಘಗಳು. ರಾಷ್ಟ್ರೀಯ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ದುಸ್ಥರವಾದ ಕಾರಣ ಸಹಕಾರ ಸಂಘಗಳು ಉದಯಕ್ಕೆ ಕಾರಣವಾಗಿದೆ. ಸಾಲ ಪಡೆಯುವುದು ಮರುಪಾವತಿಯನ್ನು ಸರಿಯಾದ ಸಮಯಕ್ಕೆ ನಡೆಸಿದ್ದೇ ಅದಲ್ಲಿ ಸಹಕಾರ ಸಂಘಗಳು ಅಭಿವೃದ್ಧಿ ಸಾದ್ಯವಾಗಲಿದೆ. ಒಂದು ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಸಾಗಿದರೆ ಸಾವಿರಾರು ರೈತರಿಗೆ ಸಹಾಯವಾಗಲಿದೆ. ಸಂಘದ ಆಡಳಿತದಲ್ಲಿ ರಾಜಕೀಯ ಬೇರೆಯುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಸಹಕಾರ ಸಂಘಗಳಲ್ಲಿ ಸಾಲ ಪಡೆದ ಜನರು ನಿಗದಿತ ಅವಧಿಯಲ್ಲಿ ಮರು ಪಾವತಿಸಬೇಕು ಎಂದು ಅವರು ಮನವಿ ಮಾಡಿದರು.
ಇದರಿಂದ ಬೇರೆಯವರಿಗೆ ಹಣಕಾಸಿನ ನೆರವು ದೊರೆತು ಸಹಕಾರ ತತ್ವ ಸಾರ್ಥಕವಾಗುತ್ತದೆಕೃಷಿ ಪತ್ತಿನ ಸಂಘವು ಸಾಲ ನೀಡುವುದೇ ಮುಖ್ಯ ಉದ್ದೇಶವಲ್ಲ. ಸದಸ್ಯರಲ್ಲಿ ಸ್ವಾವಲಂಬನೆ, ಆದಾಯ ಹೆಚ್ಚಿಸಿಕೊಳ್ಳಲು ಉತ್ತೇಜನ ನೀಡುವುದು, ವಲಸೆ ಹೋಗುತ್ತಿರುವ ಯುವಕರಲ್ಲಿ ಕೃಷಿಕರಾಗಿ ಬದುಕುವ ಧೈರ್ಯ ತುಂಬುವುದು ಸಹಕಾರಿ ಸಂಘದ ಉದ್ದೇಶವಾಗಲಿ.
ಸಹಕಾರ ಸಂಘಗಳು ಗ್ರಾಮೀಣ ಭಾಗದ ಉಸಿರಾಗಿದ್ದು ಅವುಗಳನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಜವಾಬ್ದಾರಿ ಹೊರಬೇಕು ಎಂದು ಯುವಕರಿಗೆ ಕಿವಿ ಮಾತು ಹೇಳಿದರು.
ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಮಾತನಾಡಿ, ಎಲ್ಲಿ ಪ್ರಮಾಣಿಕತೆ,ಪರಧರ್ಶಕತೆ ಹಾಗೂ ಸೇವಮನೋಭಾವ ಹೊಂದಿರುವೇಡೆ ಮಾತ್ರ ಸಹಕಾರ ಸಂಘಗಳು ಅಭಿವೃದ್ದಿಹೊಂದಲು ಸಾಧ್ಯ. ಷೇರುದಾರರ ಪ್ರಮಾಣಿಕತೆ ಸಂಘದ ಬೆಳವಣಿಯನ್ನು ಆಶ್ರಯಿಸಿದೆ. ಜಮ್ಮನಹಳ್ಳಿ ಸಹಕಾರ ಸಂಘ ಜಿಲ್ಲೆಯಲ್ಲೆ ಮಾದರಿ ಸಹಕಾರಿ ಸಂಘವಾಗಿದೆ. ಬಾಳ್ಳುಪೇಟೆ ಗ್ರಾಮದಲ್ಲಿ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್‌ನ ಶಾಖೆ ತೆರೆಯಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಈ ಭಾಗದ ಜನರ ಹಣದ ವೈವಾಟಿಗೆ ಅನುಕೂಲ ಮಾಡುವ ಉದ್ದೇಶ ಹೊಂದಲಾಗಿದೆ
ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲೆ ಎರಡನೇ ಸ್ಥಾನದಲ್ಲಿರುವ ಜಮ್ಮನಹಳ್ಳಿ ಪ್ರಾಥಮಿಕ ಸಹಕಾರ ಸಂಘ ಹಲವು ಸಮಸ್ಯೆಗಳ ನಡುವೆ ಬೆಳೆದು ನಿಂತಿದೆ. ಇದಕ್ಕೆಲ್ಲ ಪ್ರಮಾಣಿಕ ಆಡಳಿತ ಮಂಡಳಿಯೆ ಕಾರಣ. ಉತ್ತರಕರ್ನಾಟಕದಲ್ಲಿನ ಸಹಕಾರ ಸಂಘದ ಮಾದರಿಯನ್ನು ಇಲ್ಲಿಯು ಅನುಸರಿಸುವುದು ಉತ್ತಮ.
ಇದೆ ವೇಳೆ ಸಹಕಾರ ಸಂಘಕ್ಕೆ ಇದುವರೆಗೂ ದುಡಿದ 20ಕ್ಕೂ ಹೆಚ್ಚು ಮಹನೀಯರಿಗೆ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ. ಡಿ ಬಸವಣ್ಣನವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಾದ ಎಂ. ಎಂ ಉದಯ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಬಾಳ್ಳುಪೇಟೆ ಗ್ರಾ.ಪಂ ಅಧ್ಯಕ್ಷೆ ಗೌರಮ್ಮ. ಹಾಸನಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿಜಗದೀಶ್,ಸಮಾಜಸೇವಕ ಬಾಳ್ಳುಮಲ್ಲಿಕಾರ್ಜುನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮೇಲ್ವಿಚಾರಕರಾದ ನವೀನ್,ಸಂಘದ ಸಿಇಒ ಮಂಜುನಾಥ್ ಸಹಕಾರ ಸಂಘದ ಎಲ್ಲಾ ನಿರ್ದೇಶಕರು ಸಿಬ್ಬಂದಿ ವರ್ಗದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


