ಸಕಲೇಶಪುರ: ಬಾಲಕನ ಪುಂಡಾಟ ತಾಳಲಾರದೆ ಪೋಷಕರೇ ಆತನನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿ ಮನೆಯಲ್ಲಿ ಕೂಡಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಕ್ಯಾನಹಳ್ಳಿಯ ಕಾಫಿತೋಟ ದಲ್ಲಿ ಕಾರ್ಮಿಕರಾಗಿರುವ ಅಸ್ಸಾಂ ಮೂಲದ ಹಸೀನಾಬಾನು-ಅಮೀರ್‌ ಹುಸೇನ್‌ ದಂಪತಿಗೆ 7 ಮಕ್ಕಳಿದ್ದು, 6ನೇ ಮಗನಾದ ಉಬೇದುಲ್ಲಾ (11) ಅತ್ಯಂತ ತುಂಟನಾಗಿದ್ದ.

ಪೋಷಕರು ಕೆಲಸಕ್ಕೆ ತೆರಳಿದ ಬಳಿಕ ಮನೆಬಿಟ್ಟು ಹೋಗುತ್ತಿದ್ದ ಈತನನ್ನು 2-3 ದಿನಗಳ ಕಾಲ ಹುಡುಕಿ ಕರೆತಂದಿದ್ದರು.10 ದಿನಗಳಿಂದ ಈತನನ್ನು ಸರಪಳಿಯಿಂದ ಬಂಧಿಸಿದ್ದರು.

ಬುಧವಾರ ಅದ್ಹೇಗೋ ಮನೆಯಿಂದ ಹೊರಬಂದ ಬಾಲಕ ಸರಪಳಿ ಸಹಿತ ಸಮೀಪದ ರಸ್ತೆಯಲ್ಲಿ ಕುಳಿತಿದ್ದ. ಇದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದರು.

ಪೋಲಿಸರು ಆಗಮಿಸಿ ಬಾಲಕನನ್ನು ರಕ್ಷಿಸಿದ್ದು, ಆತನನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಹಸ್ತಾಂತರಿಸಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed