ಬೇಲೂರು : ತಾಲೂಕಿನ ಅರೆಮಲೆನಾಡು ಭಾಗವಾದ ಕಳ್ಳೇರಿ ಗ್ರಾಮಪಂಚಾಯತಿ ವ್ಯಾಪ್ತೀಯ ಮಂಡಲಮನೆ,ಅಂಜನಹಳ್ಳಿ ಕುಂಬಾರಹಳ್ಳಿ ಹಳೆ ಗೆಂಡೇಹಳ್ಳಿ ಭಾಗಗಳಲ್ಲಿ ಸುಮಾರು ೧೮ ಕ್ಕೂ ಹೆಚ್ಚು ಆನೆಗಳು ಅಪಾರ ಪ್ರಮಾಣದ ಬೆಳೆಹಾನಿ ಮಾಡುತ್ತಿದ್ದು ಬೀಟಮ್ಮ ಗ್ಯಾಂಗ್ ನ ದಾಂಧಲೆಗೆ ಕಾಫಿ ತೆಂಗು ಅಡಿಕೆ ಇನ್ನಿತರ ಅಪಾರ ಪ್ರಮಾಣದ ಬೆಳೆಗಳನ್ನು ತುಳಿದು ಹಾಳುಮಾಡಿದೆ.

ಈ ಸಂಭಂದ ಮಾತನಾಡಿದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬಾಣಸವಳ್ಳಿ ಅಶ್ವಥ್ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳ ಹಿಂಡನ್ನು ಒಂದು ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಗೆ ಓಡಿಸಲಾಗಿತ್ತು.

ಆದರೆ ಅಲ್ಲಿಂದ ಮತ್ತೆ ಈ ನಮ್ಮ ಭಾಗಕ್ಕೆ ಬಂದಿರುಬ ೨೨ ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದಲ್ಲದೆ ತಮ್ಮ ಜೀವವನ್ನು ಕೈಯಲ್ಲಿಡಿದುಕೊಂಡು ಹೊಲಗದ್ದೆ ಕಾಫಿ ತೋಟಗಳಿಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಇಲಾಖೆಯವರು ಕೇವಲ ಕಣ್ಣೊರೆಸುವ ಕೆಲಸ ಮಾಡುತ್ತಿದ್ದು ಕೇವಲ ಪಟಾಕಿ ಹೊಡೆದು ಆನೆಗಳನ್ನು ಓಡಿಸಿದ್ದೇವೆಂದು ಅನುಕಂಪ ವನ್ನು ತೋರಿಸುವ ಬದಲು ಶಾಶ್ವತವಾಗಿ ನಮಗೆ ಪರಿಹಾರ ನೀಡುವಂತೆ ಮಾಡಬೇಕು.ಇಲ್ಲದಿದ್ದರೆ ಈ ಭಾಗದ ರೈತರು ಹಾಗೂ ಬೆಳೆಗಾರರು ಸಂಪೂರ್ಣ ಹಾನಿಯಾಗಿರುವ ವಸ್ತುಗಳನ್ನು ತಂದು ಅರಣ್ಯ ಇಲಾಖೆ ಮುಂಭಾಗದಲ್ಲಿ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed