ಬೇಲೂರು : ಆರೋಗ್ಯ ಇಲಾಖೆಯಲ್ಲಿ ಮೂಲ ಸೌಕರ್ಯವಿಲ್ಲದೆ ಹಾಗೂ ಗ್ರಾಮೀಣ ಭಾಗದಲ್ಲಿರುವಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವಸತಿಗೃಹಗಳಿಲ್ಲದೆ ತೊಂದರೆಯಾಗುತ್ತಿರುವುದನ್ನು ಖಂಡಿಸಿ ತಾಲೂಕು ಆರೋಗ್ಯ ಕಚೇರಿ ಮುಂಭಾಗದಲ್ಲಿ ಏಕಾಂಗಿ ಹೋರಾಟಗಾರ ತೀರ್ಥಪ್ಪ ಅವರಿಂದ ಆರೋಗ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮಾತನಾಡಿದ ಏಕಾಂಗಿ ಹೋರಾಟಗಾರ ತೀರ್ಥಪ್ಪ ತಾಲೂಕು ಆರೋಗ್ಯ ಕಚೇರಿ ಸೇರಿದಂತೆ ಕೆಸಗೋಡು ಬಿಕ್ಕೋಡು ಗೆಂಡೇಹಳ್ಳಿ ಚೀಕನಹಳ್ಳಿ ಸೇರಿದಂತೆ ಸಮುದಾಯ ಕೇಂದ್ರಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಆಸ್ಪತ್ರೆಗಳು ನಾಯಿಗಳ ಹಾಗೂ ಜಾನುವಾರಗಳ ಆಶ್ರಯತಾಣವಾಗಿದೆ.ಇನ್ನು ಆಸ್ಪತ್ರೆಯಲ್ಲಿ ವಸತಿ ಗೃಹಗಳ ದುಸ್ಥಿತಿಯನ್ನು ಹೇಳತೀರದಾಗಿದೆ.

ಕೇವಲ ಕಾಟಚಾರಕ್ಕಾಗಿ ಮಾತ್ರ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ.ಅಲ್ಲದೆ ಸರಿಯಾದ ರೀತಿಯಲ್ಲಿ ವಸತಿ ಗೃಹಗಳು ಇಲ್ಲದ ಕಾರಣ ವೈದ್ಯರು ಗ್ರಾಮೀಣ ಭಾಗಗಳಿಗೆ ಬರುತ್ತಿಲ್ಲ.ಇಷ್ಟೆಲ್ಲಾ ತೊಂದರೆಯಾಗುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.

ಈಗಾಗಲೇ ಮೂರುನಾಲಕು ಬಾರಿ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯತಿ ಹಾಗೂ ಆರೋಗ್ಯಾಧಿಕಾರಿಗಳಿಗೂ ಲಿಖಿತವಾಗಿ ಖುದ್ದು ಅವರಿಗೆ ಮನವಿ ಸಲ್ಲಿಸಿದ್ದರೂ ಆ ಮನವಿಗೆ ಸ್ಪಂದನೆ ದೊರೆತಿಲ್ಲ.

ಕೂಡಲೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು.ಗ್ರಾಮೀಣ ಭಾಗದಲ್ಲಿ ಇರುವ ಸಮುದಾಯ ಆರೋಗ್ಯ ಕೆಂದ್ರಗಳಿಗೆ ಕಾಯಕಲ್ಪ ನೀಡಬೇಕೆಂದು ಆಗ್ರಹಿಸಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed