
ಬೇಲೂರು: ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ ಮತದಾರರು ಲೋಕಸಭಾ ಚುನಾವಣೆ ಸ ಚುನಾವಣೆಯಲ್ಲಿ ಯಾವುದೇ ಆಸೆ, ಆಮಿಷ, ಒತ್ತಡಕ್ಕೆ ಒಳಗಾಗದೇ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂದು ತಹಶಿಲ್ದಾರರ ಮಮತ ಎಂ. ಹೇಳಿದರು.
ಭಾರತ್ ಸ್ಜೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪಟ್ಟಣದಲ್ಲಿ ಮತದಾನದ ಬಗ್ಗೆ ಜಾಗೃತಿ ಜಾಥ ನಡೆಸಲಾಯಿತು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಮತದಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಲು ಅರಿವು ಮೂಡಿಸಲಾಗುತ್ತಿದೆ. ಯಾವುದೇ ಜಾತಿ, ಧರ್ಮಗಳ ಹಾಗೂ ಯಾವುದೇ ಆಮಿಷಕ್ಕೊಳಗಾಗದೇ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿ ಸರ್ಕಾರ ಹಲವಾರು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಎಂ.ಆರ್. ವೆಂಕಟೇಶ್,ಮತದಾನದ ಬಗ್ಗೆ ಎಷ್ಟೇ ಜಾಗೃತರಾದರೂ ಕೂಡ ಯುವ ಜನತೆ ಇಂದು ಅತ್ಯಂತ ನಿರಾಸಕ್ತಿ ತೋರುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಸರ್ಕಾರ ಯಾವುದೇ ಇರಲಿ ಯಾವುದೇ ಬರಲಿ ಆದರೆ ಮತದಾನದಿಂದ ಯಾರೂ ಕೂಡ ಹಿಂದುಳಿಯಬಾರದು.
ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತ ಕೆಲಸವನ್ನು ಕುಟುಂಬದ ಸದಸ್ಯರೆಲ್ಲರೂ ಮಾಡಬೇಕು .ಯುವ ಮತದಾರರಿಗೂ ಸಹ ಇದರ ಬಗ್ಗೆ ಹೆಚ್ಷಿನ ಅರಿವು ಇರಬೇಕು.ಹಿಂದೆ ಮನೆಯಲ್ಲಿರುವ ಪ್ರತೀ ಹಿರಿಯ ಸದಸ್ಯರೂ ಸಹ ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದರು.ಆ ಬದ್ಧತೆ ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಇಲ್ಲವಾಗಿದೆ. ಸ್ಕೌಟ್ ಮತ್ತು ಗೈಡ್ಸ್ ಸದಸ್ಯರು ಸ್ಬಚ್ಚತೆ ಕೆರೆ ಕಟ್ಟೆಗಳ ಸ್ವಚ್ಚತೆ ಸೇರಿದಂತೆ ಸಾಮಾಜಿಕ ಸೇವೆ ಮಾಡುವುದರಲ್ಲಿ ಅವರ ಕೆಲಸ ನಿಜಕ್ಕೂ ಶ್ಲಾಘನೀಯ ಇಂತಹ ಜಾಗೃತಿಗಳನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲಿ ಎಂದರು.
ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿನಿಧಿ ಮಮತಾ ಮಾತನಾಡಿ ಪಿಪಿಡೆ ಸಂಸ್ಥಾಪನಾ ದಿನವಾದ ಇಂದು ಮತದಾನದ ಜಾಗೃತಿ ಜಾಥವನ್ನು ನಮ್ಮ ತಾಲೂಕಿನ ವಿವಿಧ ಒಟ್ಟು ೬ ಶಾಲೆಗಳ ವಿದ್ಯಾರ್ಥಿಗಳಿಂದ ಜಾಥದ ಮೂಲಕ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಹಾಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್,ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷ, ಪಾಲಾಕ್ಷ ಮೂರ್ತಿ,ಪುರಸಭೆ ಸದಸ್ಯೆ ಉಷಾಸತೀಶ್,ಸ್ಕೌಟ್ಸ್ ಮತ್ತು ಗೈಡ್ಸ್ ನ ತಾಲ್ಲೂಕು ಕಾರ್ಯದರ್ಶಿ ಪರಮೇಶ್ವರಪ್ಪ, ಸಂದೀಪ್ ಚಂದ್ರಶೇಖರ್ ಸೇರಿದಂತೆ ಇತರರು ಹಾಜರಿದ್ದರು.