*ಆಪರೇಶನ್ ಕಾಂತಿ ಕಾರ್ಯಾಚರಣೆಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದ ಮಲೆನಾಡು ರಕ್ಷಣಾ ಸೇನೆ*ಇಂದು ಹೆಬ್ಬನಹಳ್ಳಿಯ ಸುತ್ತಮುತ್ತ ಸಂಚರಿಸುತ್ತಾ 3 ಜನರನ್ನು ಕೊಂದು ಹಲವು ತೊಂದರೆ ನೀಡುತ್ತಾ ತಿರುಗಾಡುತ್ತಿದ್ದ ಕಾಂತಿ ಎಂಬ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲಾಯಿತು. ಆನೆಯೊಂದಿಗೆ ದಿನನಿತ್ಯದ ಮಾನವ ಸಂಘರ್ಷ ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಇನ್ನು ಮುಂದಿನ ದಿನಗಳಲ್ಲಿ ಕಾಡಾನೆ ಹಾವಳಿಯ ಸಂಪೂರ್ಣ ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆಯೊಂದಿಗೆ ಮಲೆನಾಡು ರಕ್ಷಣಾ ಸೇನೆ ಸದಾ ಜೊತೆಗಿದೆ. ಹಾಗೆಯೇ ಇಂದಿನ ಕಾರ್ಯಾಚರಣೆಯನ್ನು ನೇರವಾಗಿ ಕಂಡು ನಮಗನಿಸಿತು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಎಷ್ಟು ಕಷ್ಟ ಪಟ್ಟು ಕಾರ್ಯಾಚರಣೆ ಮಾಡುತ್ತಾರೆ ಎಂದು. ಕಾರ್ಯಾಚರಣೆಯಲ್ಲಿ ಜೀವದ ಹಂಗು ತೊರೆದು ಕಾಂತಿ ಯೆಂಬ ಕಾಡಾಣೆಗೆ ಇಂದು ರೇಡಿಯೋ ಕಾಲರ್ ಅಳವಡಿಸಿದಂತ ಅರಣ್ಯ ಇಲಾಖೆಯ ಆರ್.ಆರ್.ಟಿ ಸಿಬ್ಬಂದಿ ಗಳಿಗೆ, ಮತ್ತು ಅರಣ್ಯ ಇಲಾಖೆಯ ಸಮಸ್ತ ಸಿಬ್ಬಂದಿಗಳಿಗೂ, ಪರಿಸರ ಪ್ರೇಮಿ ಹುರುಡಿ ವಿಕ್ರಂ ಅಣ್ಣ, ಸಾಮಾಜ ಸೇವಕರಾದ ಸುರೇಶ್ ಆಳ್ವಾ ಹಾಗೂ ಈ ಕಾರ್ಯಾಚರಣೆ ಯಶಸ್ವಿಯಾಗಲು ಶ್ರಮಿಸಿದ ಎಲ್ಲರಿಗು ನನ್ನ ಹೃದಯ ಪೂರ್ವಕ ಧನ್ಯವಾದಗಳು. ಇಂತಿ : ಸಾಗರ್ ಜಾನೇಕೆರೆಸಂಸ್ಥಾಪಕ ರಾಜ್ಯಾಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *