ಸಕಲೇಶಪುರದ ಕ್ಯಾಮನಹಳ್ಳಿ ಗ್ರಾಮದ ಮುರುಳಿ ಎಂಬುವವರ ಮನೆಯ ಮೇಲೆ ರಾತ್ರಿ 10.30 ರ ಸುಮಯದಲ್ಲಿ ಕಿಟಕಿ ಪಕ್ಕ ಇಟ್ಟಿದ್ದ ಭತ್ತ ತಿನ್ನಲು ಕಾಡಾನೆ ದಾಳಿ ಮಾಡಿದೆ. ಆನೆ ಗುದ್ದಿದ ರಭಸಕ್ಕೆ ಅವರ ಮನೆಯ ಹಂಚುಗಳು ಪುಡಿ ಪುಡಿಯಾಗಿದೆ ಮನೆ ಕಿಟಕಿ ಮುರಿದು ಹಾಕಿದೆ. ಮನೆಯೊಳಗಿದ್ದ ಆ ಮನೆಯ ನಿವಾಸಿಗಳು ಜೀವ ಭಯದಿಂದ ಘಟನೆಗಳನ್ನು ನೋಡುತ್ತಾ ಕಾಲ ಕಳೆದಿದ್ದಾರೆ.