ನೂತನ ಶಾಸಕರಿಗೆ ಸಕಲೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನ.. ಸಕಲೇಶಪುರ ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಕಲೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ದಿ ಸಮಿತಿ ವತಿಯಿಂದ ಸಕಲೇಶ್ವರಸ್ವಾಮಿ ಗೆ ಪೂಜೆ ಸಲ್ಲಿಸಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಸಿಮೆಂಟ್ ಮಂಜುರವರನ್ನು ಶಾಲು ಮತ್ತು ಹಾರ ಹಾಕಿ ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಸಿಮೆಂಟ್ ಮಂಜು ಕುಟುಂಬ ವರ್ಗದವರು, ದೇವಸ್ಥಾನ ಅಭಿವೃದ್ಧಿ ಸಮಿತಿಯ ಬ್ಯಾಕರವಳ್ಳಿ ಜಯಣ್ಣ,ನಂದಿಕೃಪ ರಾಜು, ಮೋಹನ್ ಆಚಾರ್ ಬಿಜೆಪಿ ಮುಖಂಡರಾದ ಮೋಹನ್, ಆನಂದ ಲಿಯೋ ವಾಸ್ ಇತರರು ಹಾಜರಿದ್ದರು.