ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ 91ನೇ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಹಂಚಿದ ತಾಲೂಕು ಜೆಡಿಎಸ್ …ಸಕಲೇಶಪುರ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಆರಿಸಿದ ಕನ್ನಡಿಗ, ಮಣ್ಣಿನ ಮಗ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡರ 91ನೇ ಹುಟ್ಟು ಹಬ್ಬದ ಪ್ರಯುಕ್ತ ಸಕಲೇಶಪುರ ತಾಲೂಕು ಜೆಡಿಎಸ್ ವತಿಯಿಂದ ಇಂದು ಸಕಲೇಶಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಹಂಚಲಾಯಿತುಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷರು ಆದ ಬಿ ಎ ಜಗನ್ನಾಥ್ ಮಾತನಾಡಿ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಹಂಚಲಾಗುತ್ತಿದೆ ಹಾಗೆ ದೇವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಆಯುಷ್ ಆರೋಗ್ಯ ನೀಡಲಿ ಎಂದು ಶುಭ ಹಾರೈಸಿ ಇನ್ನು ಹೆಚ್ಚು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ದೊಡ್ಡದಿಣ್ಣೆ ಸ್ವಾಮಿಗೌಡ ,ಪುರಸಭಾ ಅಧ್ಯಕ್ಷರಾದ ಕಾಡಪ್ಪ ,ಜೆಡಿಎಸ್ ಪಕ್ಷದ ಪ್ರಮುಖರಾದ ಸಚಿನ್ ಪ್ರಸಾದ್ ಪುರಸಭಾ ಸದಸ್ಯರುಗಳಾದ ಎಸ್ ಡಿ ಆದರ್ಶ್ ,ಮುಕೇಶ್ ಶೆಟ್ಟಿ ಕುಡುಗರಹಳ್ಳಿ ಉಮೇಶ್, ಜ್ಯೋತಿ ರಾಜಕುಮಾರ್ ,ಸರಿತಾ ಗಿರೀಶ್ ಇತರರು ಇದ್ದರು.