
ಬೇಲೂರು : “ಯಗಚಿ ನದಿಪಾತ್ರದಲ್ಲಿ ಜಲಕ್ಷಾಮ -ನೀರು ಹರಿಸುವಂತೆ ಆಗ್ರಹ -ಹೋರಾಟದ ಎಚ್ಚರಿಕೆ”
ಬೇಸಿಗೆ ಬಿಸಿಲಿನ ತಾಪಕ್ಕೆ ತತ್ತರಿಸಿದ ಜನತೆ.ಜಾನುವಾರು ಕುಡಿಯುವ ನೀರಿಗೆ ತಾತ್ವರ.ಗ್ರಾಮಸ್ಥರಿಂದ ವಾರದ ಗಡುವು -ಹೋರಾಟಯಗಚಿ ಜಲಾಶಯದಲ್ಲಿ ಸದ್ಯ ೧.೫ ಟಿಎಂಸಿ ನೀರು ಲಭ್ಯ
ಬೇಸಿಗೆ ತಾಪ ದಿನಕಳೆದಂತೆ ಹೆಚ್ಚಾಗುತ್ತಿರವ ಹಿನ್ನಲೆಯಲ್ಲಿ ಅರೆಮಲೆನಾಡು ಭಾಗದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಶೀಘ್ರವೇ ಯಗಚಿ ನದಿಗೆ ಜಲಾಶಯದಿಂದ ನೀರು ಹರಿಸುವ ಮೂಲಕ ಜನ-ಜಾನುವಾರುಗಳ ಕಷ್ಟವನ್ನು ಪೂರೈಸಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವೆಂದು ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಹೌದು! ತಾಲ್ಲೂಕಿನ ಗಡಿಭಾಗದ ದೊಡ್ಡಿಹಳ್ಳಿ ಗ್ರಾಮಸ್ಥರು ಯಗಚಿ ಜಲಾಶಯದಿಂದ ನೀರು ಹರಿಸಬೇಕು ಕಾರಣ ಬೇಸಿಗೆ ತಾಪಮಾನ ಹೆಚ್ಚುವ ಮೂಲಕ ಜಾನುವಾರುಗಳ ಕುಡಿಯುವ ನೀರಿಗೆ ಅಭಾವ ತಲೆದೊರಿದೆ. ನದಿ ಪಾತ್ರದಲ್ಲಿ ನೀರು ಇಲ್ಲದೆ ಮೈಲಿಗಟ್ಟಲೇ ನೀರು ಹೊತ್ತು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಜಾನುವಾರು ಸಮೇತ ನದಿಗೆ ಇಳಿದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಗ್ರಾಮದ ತಿರುಮಲಯ್ಯ ಮಾತನಾಡಿ, ಕಳೆದ ೧೫ ದಿನದಿಂದ ನೀರಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನಮ್ಮ ಗೋಳನ್ನು ಯಾರು ಕೇಳುತ್ತಿಲ್ಲ, ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಮೌನ ಮುರಿದು ಕ್ರಮಕೈಗೊಳ್ಳಬೇಕಿದೆ. ಹೈನುಗಾರಿಕೆ ನಂಬಿ ಜೀವನ ನಡೆಸಲಾಗುತ್ತಿದೆ. ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲವೆಂದರೆ ಏನು? ಮಾಡುವುದು ಎಂದು ಪತ್ರಿಕೆಯೊಂದಿಗೆ ತಮ್ಮ ಆಳಲು ಹೇಳಿಕೊಂಡರು.
ದೊಡ್ಡಿಹಳ್ಳಿ ಗ್ರಾಮದ ಮುಖಂಡ ಯಶೋಧರ್ ಮಾತನಾಡಿ, ಬೇಲೂರು ಮೂಲಕ ಹರಿಯುವ ಯಗಚಿ ದೊಡ್ಡಿಹಳ್ಳಿ, ಪಡುವಳಲು,ಹನಿಕೆ, ಮಲ್ಲರಹೊಸಹಳ್ಳಿ ಸೇರಿದಂತೆ ವಿವಿಧ ಗ್ರಾಮದ ಸಮೀಪದಲ್ಲಿ ಹಾದು ಹೊಗುತ್ತದೆ. ೨೦೦೪ ರಲ್ಲಿ ಬೇಲೂರು ಸಮೀಪದಲ್ಲಿ ಯಗಚಿಗೆ ಜಲಾಶಯ ನಿರ್ಮಿಸಿದ ಬಳಿಕ ಇಲ್ಲಿ ಕೇವಲ ಮಳೆಗಾಲದ ಸಂದರ್ಭದಲ್ಲಿ ನೀರು ಹರಿಯುತ್ತದೆ. ಇದೇ ನೀರು ನದಿ ಪಾತ್ರದ ಗ್ರಾಮಗಳಿಗೆ ಜನ-ಜಾನುವಾರುಗಳಿಗೆ ಸಂಜೀವಿಯಾಗಿತ್ತು.
ಆದರೆ ಕಳೆದ ಒಂದು ತಿಂಗಳ ಬಿಸಿಲಿನ ತಾಪಕ್ಕೆ ಯಗಚಿ ನದಿ ಪಾತ್ರದಲ್ಲಿ ತೀವ್ರ ನೀರಿನ ಜಲಕ್ಷಾಮ ಉಂಟಾಗಿದೆ. ೨೦೨೩ ರಲ್ಲಿ ಮಳೆ ಕಡಿಮೆ ಇದ್ದರೂ ಯಗಚಿ ಜಲಾಶಯ ಭರ್ತಿಯಾಗಿತ್ತು.
ಈ ಸಂದರ್ಭದಲ್ಲಿ ನಾವುಗಳು ನದಿಪಾತ್ರಕ್ಕೆ ನೀರು ಹರಿಸಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಯಾವ ಪ್ರಯೋಜವಾಗಿಲ್ಲ, ಈಗಾಗಲೇ ಯಗಚಿ ಜಲಾಶಯದಲ್ಲಿ ೧.೫ ಟಿಎಂಸಿ ನೀರಿನ ಲಭ್ಯತೆ ಇರುವ ಕಾರಣದಿಂದ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಯಗಚಿ ನೀರಾವರಿ ನಿಗಮ ಅಧಿಕಾರಿಗಳು ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವೆಂದು ಎಚ್ಚರಿಕೆ ನೀಡಿದರು.
ಬಾಕ್ಸ್ ನ್ಯೂಸ್ : ಯಗಚಿ ಜಲಾಶಯ ಬೇಲೂರು ತಾಲ್ಲೂಕಿನಲ್ಲಿದ್ದು ಇಲ್ಲಿ ಜನತೆಗೆ ಯಾವುದೇ ಉಪಯೋಗವಾಗಿಲ್ಲ, ಅನ್ಯ ತಾಲ್ಲೂಕಿಗೆ ನೀರಾವರಿ, ಕುಡಿಯುವ ನೀರಿಗೆ ಹರಿಸುವ ಕೆಲಸ ನಡೆಯುತ್ತಿದೆ. ಅಧಿಕಾರಿಗಳು ಸ್ಥಳೀಯ ಜನತೆಯ ಹಿತವನ್ನು ಕಾಪಾಡಲು ವಾರದೊಳಗೆ ಕ್ರಮಕ್ಕೆ ಮುಂದಾಗಬೇಕು ಎಂದು ದೊಡ್ಡಿಹಳ್ಳಿ ಗ್ರಾಮದ ಮುಖಂಡ ಯಶೋಧರ್ ಹೇಳಿದರು.