ಬೇಲೂರು : “ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಜಾಥ – ಮಾನವ ಸರಪಳಿ ರಚನೆ”

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ನಡೆಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂಬ ಹಿನ್ನೆಲೆಯಲ್ಲಿ ಬೇಲೂರು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಶನಿವಾರ ಐತಿಹಾಸಿಕ ಪ್ರಸಿದ್ಧ ಚನ್ನಕೇಶವ ದೇಗುಲದಿಂದ ಕೆಂಪೇಗೌಡ ವೃತ್ತದ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿ ಮತದಾನದ ಮಹತ್ಚ ಹಾಗೂ ಕಡ್ಡಾಯ ಮತದಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದಲ್ಲದೆ ಸಂವಿಧಾನದ ಪೀಠಿಕೆಯನ್ನು ಓದಿ ಮತದಾನ ನಡೆಸುವ ಬಗ್ಗೆ ಪ್ರತಿಜ್ಞೆ ನಡೆಸಲಾಯಿತು.

ಚನ್ನಕೇಶವ ದೇಗುಲದಿಂದ ಸ್ವೀಪ್ ಸಮಿತಿಯ ಮತದಾನ ಜಾಗೃತಿ ಅಭಿಯಾನಕ್ಕೆ ತಹಸೀಲ್ದಾರ್ ಎಂ.ಮಮತ ಮತ್ತು ತಾಲ್ಲೂಕು ಪಂಚಾಯತಿ ಕಾರ್ಯಾ ನಿರ್ವಾಹಕ ಅಧಿಕಾರಿ ಸತೀಶ್ ಚಾಲನೆ ನೀಡಿದರು.

ಈ ವೇಳೆ ಪುರಸಭಾ ಮುಖ್ಯಾಧಿಕಾರಿ ಶ್ರೀಮತಿ ಇಂದು, ಪೋಲಿಸ್ ಅಧಿಕಾರಿಗಳು ಮತ್ತು ವಿವಿಧ ಇಲಾಖ ಅಧಿಕಾರಿಗಳು ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಬೇಲೂರು ತಹಸೀಲ್ದಾರ್ ಎಂ. ಮಮತ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಮತದಾನದ ಪ್ರಮಾಣ ಹೆಚ್ಚಳವಾಗಬೇಕು ಮತ್ತು ಮತದಾರರು ಯಾವುದೇ ಆಮಿಷಕ್ಜೆ ಒಳಾಗದೆ ನಿರ್ಭಿತಿಯಿಂದ ಮತದಾನ ಮಾಡಬೇಕು ಮತ್ತು ಮತದಾನದ ಮಹತ್ವವನ್ನು ತಿಳಿಸುವ ಹಿನ್ನೆಲೆಯಲ್ಲಿ ಇಂದು ತಾಲ್ಲೂಕು ಸ್ವೀಪ್ ಸಮಿತಿಯ ವತಿಯಿಂದ ಕಾಲ್ನಡಿಗೆ ಜಾಥವನ್ನು ಹಮ್ನಿಕೊಳ್ಳಲಾಗಿದೆ.

ಈ ಕಾರ್ಯಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದಾರೆ. ಮತ್ತು ಪಂಚಾಯತ ಅಧಿಕಾರಿಗಳು ಆಗಮಿಸಿದ್ದು ಅವರುಗಳು ತಮ್ಮ ವ್ಯಾಪ್ತಿಯಲ್ಲಿ ಮತದಾನ ನಡೆಯುವ ದಿನಾಂಕದ ತನಕ ಜಾಥವನ್ನು ನಡೆಸಿ ಮತದಾನದ ಅರಿವು ಮೂಡಿಸಲಿದ್ದಾರೆ ಎಂದ ಅವರು ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಶ್ರೇಷ್ಠ ಸ್ಥಾನ ಮಾನ ಕಲ್ಪಿಸಿದೆ.

ಬಡವ, ಶ್ರೀಮಂತ, ಶ್ರೇಷ್ಠ ಎನ್ನದೆ ಎಲ್ಲರಗೂ ಸಮಾನತೆಯಿಂದ ಮತದಾನದ ಅವಕಾಶ ನೀಡಿದೆ. ಪ್ರತಿಯೊಬ್ಬ ‌ನಾಗರಿಕರು ತಮ್ಮ ಜವಾಬ್ದಾರಿ ಅರಿತು ಮತಗಟ್ಟೆಯ ಬಳಿ ತೆರಳಿ ಮತದಾನ ನಡೆಸಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯತ ಕಾರ್ಯಾನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ, ಮತದಾನ ಒಂದು ಪವಿತ್ರ ಕಾರ್ಯ, ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ತಿಳಿದವರೇ ಮತದಾನದಿಂದ ದೂರ ಇರುವುದು ನಿಜಕ್ಕೂ ಶೋಚನೀಯ.

ಇಂತಹ ಘಟನೆ ನಡೆಯದಂತೆ ಪ್ರತಿಯೊಬ್ಬರು ಕೂಡ ಮತದಾನ ನಡೆಸಬೇಕು ಎಂದು ಚುನಾವಣೆ ಆಯೋಗದ ಮಾರ್ಗದರ್ಶನ ಪಡೆದು ಬೇಲೂರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮತದಾನ ಜಾಗೃತಿ ಅಭಿಯಾನವನ್ನು ‌ಕಾಲ್ನಡಿಗೆ ನಡೆಸುವ ಮೂಲಕ ಪಟ್ಟಣದ ಹೃದಯ ಭಾಗದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ ಎಂದ ಅವರು ಇಂದಿನಿಂದಲೇ ತಾಲ್ಲೂಕಿನ ೩೭ ಗ್ರಾಮ ಪಂಚಾಯತಿ ಮತ್ತು ಪುರಸಭಾ ವ್ಯಾಪ್ತಿಯಲ್ಲಿ ಮತದಾನದ ಮಹತ್ವ ಮತ್ತು ಉದ್ದೇಶದ ಜಾಗೃತಿ ಮೂಡಿಸಲಾಗುತ್ತದೆ.

ಇದಕ್ಕೆ ಎಲ್ಲಾ ಇಲಾಖೆ ಅಧಿಕಾರಿಗಳು ಕೈಜೊಡಿಸಿದ್ದಾರೆ. ವಿಶೇಷವಾಗಿ ಮಲೆನಾಡು ಭಾಗದಲ್ಲಿನ ಸುಮಾರು ೮೧ ಮತಗಟ್ಟೆಗಳಲ್ಲಿ ಕಾಡಾನೆ ಸಮಸ್ಯೆಯಿಂದ ಮತದಾನ ಇಳಿಕೆಯಾಗುವ ಸೂಚನೆ ಕಂಡ ಬಳಿಕ ಅಲ್ಲಿಗೆ ವಿಶೇಷ ತಂಡ ರಚಿಸಿ ಯಾವುದೇ ಭಯವಿಲ್ಲದೆ ಮತದಾನ ನಡೆಸಲು ಅವಕಾಶ ನೀಡಲಾಗಿದೆ.

ಮತದಾನದ ಬಗ್ಗೆ ಮತ್ತು ಜವಾಬ್ದಾರಿಯುತ ಮತದಾರರಾಗುವುದು ಹೇಗೆ ಎಂಬ ಮಾಹಿತಿಯನ್ನು ಒದಗಿಸುತ್ತದೆ. ಬಹಳಷ್ಟು ಜನರು ಮತದಾನ ಮಾಡಲು ಬಯಸುತ್ತಾರೆ, ಆದರೆ ಅನೇಕರಿಗೆ ಅದರ ಅಗತ್ಯತೆ ಮತ್ತು ಅದನ್ನು ಹೇಗೆ ಚಲಾಯಿಸಬೇಕು ಎಂಬುದರ ಬಗ್ಗೆ ತಿಳಿದಿರುವುದಿಲ್ಲ.

ಇಲ್ಲಿ ಮತದಾನದ ಜಾಗೃತಿ ಮೂಡುತ್ತದೆ. ಮತದಾನದ ಮಹತ್ವವನ್ನು ಜನರು ಅರ್ಥಮಾಡಿಕೊಳ್ಳಲು ಮತದಾನ ಜಾಗೃತಿಯ ಪರಿಕಲ್ಪನೆಯಾಗಿದೆ. ಮತದಾರರು ತಮ್ಮ ಸರ್ಕಾರವನ್ನು ನಿಯಂತ್ರಿಸಲು ಮತದಾನವು ಒಂದು ಪ್ರಮುಖ ಮಾರ್ಗವಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ನಾಗರಿಕರು ತಮ್ಮ ನಾಯಕರಿಂದ ತಮಗೆ ಬೇಕಾದುದನ್ನು ವ್ಯಕ್ತಪಡಿಸಲು ಇದು ಒಂದು ವಿಧಾನವಾಗಿದೆ.

ಈ ಸಂದರ್ಭದಲ್ಲಿ ಪುರಸಭೆ ಕಂದಾಯ ಅಧಿಕಾರಿ ಪ್ರಸನ್ನ ಆರೋಗ್ಯ ಅಧಿಕಾರಿ ಲೋಹಿತ್ ಅಬಕಾರಿ ಇನ್ಸ್ಪೆಕ್ಟರ್ ಪೃಥ್ವಿ ಪುರಸಭಾ ಮತ್ತು ತಾಲ್ಲೂಕು ಪಂಚಾಯತ ಹಾಗೂ ವಿವಿಧ ಇಲಾಖೆಯ ‌ಅಧಿಕಾರಿಗಳು ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *