
ಆಲೂರು : ತಾಲ್ಲೂಕಿನ ಕೆ ಹೊಸಕೋಟೆ ಹೋಬಳಿಯ ನಿಡಗರಹಳ್ಳಿ ಗ್ರಾಮದ ಕೆ ಹೊಸಕೋಟೆ ಸೋಮಶೇಖರ್, ವೆಂಕಟೇಶ್,ಕೀರ್ತಿರಾಜ್ ಅವರಿಗೆ ಸೇರಿದ ಎರಡು ಎಕ್ಕರೆ ಕಾಫಿ ತೋಟ ಹಾಗೂ ಕಳು ಮೆಣಸು, ಬೆಂಕಿಗೆ ಆಹುತಿಯಾಗಿರುತ್ತದೆ.
ಇದನ್ನು ಜೆಡಿಎಸ್ ತಾಲೂಕು ಅದ್ಯಕ್ಷರು ಅದ ಮಂಜೆಗೌಡರು, ಮಾಜಿ ತಾಲೂಕು ಉಪಾಧ್ಯಕ್ಷರಾದ ಕಾಂತರಾಜ್, ಕರ್ಣಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷರಾದ , ಶಶಿಧರ್ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಬೇಟಿ ಮಾಡಿ ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಕ್ತ ಪರಿಹಾರವನ್ನು ನೀಡಲು ಒತ್ತಾಯಿಸಿದರು.
ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ರಘು ಪಾಳ್ಯ ಸ್ಥಳಕ್ಕೆ ಭೇಟಿ ನೀಡಿ ನೋಂದ ರೈತರಿಗೆ ಸಾಂತ್ವನ ಹೇಳಿದರು.




