ಸಕಲೇಶಪುರ :- ಪ್ರಸಿದ್ಧ ಪ್ರವಾಸಿ ತಾಣವಾದ ಹೊಸಳ್ಳಿ ಗುಡ್ಡ, ಮೂಕನಮನೆ ಪಾಲ್ಸ್, ಕಾಗಿನರೆ ಹಾಗೂ ಧರ್ಮಸ್ಥಳ,ಸುಬ್ರಮಣ್ಯ,ಬಿಸಲೆಘಾಟ್ ಕಡೆಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಿರುಗಾಡುವ ಕರಡಿಗಾಲ ಕೂಡಿಗೆಯ ವೃತ್ತದ ರಸ್ತೆಗೆ ಉಬ್ಬು ಹಾಗೂ ನಾಮಫಲಕಗಳನ್ನು ನಿರ್ಮಿಸಿ ಅಪಘಾತಗಳನ್ನು ತಪ್ಪಿಸಬೇಕೆಂದು ವಳಲಹಳ್ಳಿ ಗ್ರಾಮಸ್ಥರು ಹಾಗೂ ವಳಲಹಳ್ಳಿ ಬೆಳೆಗಾರರ ಸಂಘದವರು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತಕರಾರಿಗೆ ಮನವಿ ಸಲ್ಲಿಸಿದರು.
ಈ ವೃತ್ತದಲ್ಲಿ ವರ್ಷಕ್ಕೆ ಸುಮಾರು ಹತ್ತಕ್ಕೂ ಹೆಚ್ಚು ಅಪಘಾತಗಳಾಗುತ್ತಿದ್ದು, ಈಗಾಗಲೇ ಸ್ಥಳದಲ್ಲಿ ಎರಡು ಜನ ಸಾವನಪ್ಪಿದ್ದಾರೆ.
ಸುಮಾರು ಹತ್ತಕ್ಕೂ ಹೆಚ್ಚು ಜನ ಅಪಘಾತಕ್ಕೀಡಾಗಿ ಕೈಕಾಲುಗಳನ್ನು ಮುರಿದುಕೊಂಡಿದ್ದಾರೆ. 4 ರಸ್ತೆಗಳು ಕೂಡುವ ಈ ವೃತ್ತದ ಎರಡು ರಸ್ತೆಗಳಿಗೆ ಉಬ್ಬುಗಳನ್ನು ನಿರ್ಮಿಸಿ, ಅಪಘಾತವಲಯ ನಾಮಫಲಕವನ್ನು ಹಾಕಿಸಿ ಈ ಜಾಗದಲ್ಲಿ ಅಪಘಾತವನ್ನು ತಪ್ಪಿಸಬೇಕು. ಕೂಡಲೇ ಅಧಿಕಾರಿಗಳು ಗಮನಹರಿಸಿ ಕೆಲಸ ಮಾಡಿಕೊಡದಿದ್ದರೆ ಗ್ರಾಮ ಪಂಚಾಯಿತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಎಂದು ಹೇಳುವುದರೊಂದಿಗೆ ಸಮಸ್ಯೆಯನ್ನು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತಕರಾರಿಗೆ ಮನವರಿಕೆ ಮಾಡಿಕೊಟ್ಟರು.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತಕರಾದ ಮುರ್ಗೆಶ್ ಆದಷ್ಟು ಬೇಗ ಸ್ಥಳ ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಳಲಹಳ್ಳಿ ರಾಜೇಗೌಡ, ಹೆತ್ತೂರು ಮಹೇಶ್,ವಳಲಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಎನ್ ಕೆ ದರ್ಶನ್, ಕಾರ್ಯದರ್ಶಿ ಅರುಣ್ ಗೌಡ, ಖಜಾಂಚಿ ಹಿರಿದನಹಳ್ಳಿ ಹೂವಣ್ಣ ಗೌಡ, ಸಂಘಟನಾ ಕಾರ್ಯದರ್ಶಿ ಅನಿಲ್ ಜಾತಹಳ್ಳಿ, ನಿರ್ದೇಶಕರುಗಳಾದ ಬೊಮ್ಮನಹಳ್ಳಿ ವಿಜಯ್ ಕುಮಾರ್ ಹಾಗೂ ಹೊಸಹಳ್ಳಿ ವಿಕ್ಕಿ,ಸಮಾಜ ಸೇವಕರಾದ ವಸಂತ್ , ವಳಲಹಳ್ಳಿ ವಸಂತ್ ಇದ್ದರು.