ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯ ಶನಿದೇವರ ೨೬ನೇ ವರ್ಷದ ಶನಿದೇವರ ಜಾತ್ರೆ ಮತ್ತು ಕೆಂಡೋತ್ಸವ ಹಾಗೂ ಮಹಾ ರಥೋತ್ಸವವು ಬಹಳ ವಿಜೃಂಭಣೆಯಿಂದ ಜರುಗಿತು.

ಪ್ರಧಾನ ಅರ್ಚಕ ಹಾಗೂ ದೇವಳದ ವ್ಯವಸ್ಥಾಪಕ ರಾಜುರವರ ಉಪಸ್ಥಿತಿಯಲ್ಲಿ ನಡೆದ ಪೂಜಾ ಮಹೋತ್ಸವದ ಮೊದಲ ದಿನ ಶುಕ್ರವಾರ ರಾತ್ರಿ ಪ್ರಥಮ ಪವಿತ್ರ ಗಂಗಾ ಪೂಜೆ ಮತ್ತು ಗಣಪತಿ ಪೂಜೆ ನಂತರ ಶನೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ, ಗಂಗಾ ಕಳಸ ಪೂಜೆ, ಸ್ವಾಮಿಯವರಿಗೆ ಮಹಾರುದ್ರಾಭಿಷೇಕ,ಗಣಪತಿ, ಆಂಜನೇಯ, ನವಗ್ರಹಗಳಿಗೆ ಪಂಚಾಮೃತ ಅಭಿಷೇಕ ಹಾಗೂ ಹೂವಿನ ಅಲಂಕಾರ ಜರುಗಿತು.

ಪೂಜಾ ಕಾರ್ಯಕ್ರಮದ ಎರಡನೇ ದಿನವಾದ ಶನಿವಾರ ಬೆಳಗ್ಗೆ ಮಹಾ ಕೆಂಡೋತ್ಸವ ಬಳಿಕ ವೀರಗಾಸೆ, ಕಂಸಾಳೆ, ನಂದಿಧ್ವಜ, ಕೀಲು ಕುದುರೆ ಮತ್ತು ಕೇರಳ ಶೈಲಿಯ ಚಂಡೇವಾದ್ಯ, ಮಂಗಳೂರು ಶೈಲಿಯ ಹುಲಿ ಕುಣಿತ, ನಾಸಿಕ್ ಡೋಲ್ ಮತ್ತು ಇನ್ನಿತರ ವಿವಿಧ ಹಿಂದೂ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶನೇಶ್ವರ ಸ್ವಾಮಿಯವರ ಮಹಾರಥೋತ್ಸವ ಪಟ್ಟಣದ ರಾಜಬೀದಿಯಲ್ಲಿ ನಡೆಯಿತು.

ಈ ವೇಳೆ ಅರೇಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *