ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಟ್ರಸ್ಟ್ ಬೊಮ್ಮನಕೆರೆ ಹರಗರಹಳ್ಳಿ ವತಿಯಿಂದ ದಿನಾಂಕ 21.05.2023ರ ಭಾನುವಾರದಿಂದ 23.05.2023ರ ಮಂಗಳವಾರದವರೆಗೆ ಶ್ರೀ ನಂದೀಶ್ವರ ಸ್ವಾಮಿ ಜಾತ್ರಾ ಮಹೋತ್ಸವ.ಸಕಲೇಶಪುರ. ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಟ್ರಸ್ಟ್ ರಿ ಬೊಮ್ಮನಕೆರೆ ಹರಗರಹಳ್ಳಿ ಸಕಲೇಶಪುರ ತಾಲೂಕು ಇವರ ವತಿಯಿಂದ ದಿನಾಂಕ 21.05.2023 ಭಾನುವಾರದಿಂದ 23.05.2023 ಮಂಗಳವಾರದವರೆಗೆ ಶ್ರೀ ನಂದೀಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ.ದಿನಾಂಕ 21ನೇ ಭಾನುವಾರ ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ ಸಲ್ಲುವ ಶುಭ ಲಗ್ನದಲ್ಲಿ ವೀರಶೈವ ವಟುಗಳಿಗೆ ದೀಕ್ಷಾ ಸಂಸ್ಕಾರಗಳು ಹಾಗೂ ಶಿವ ದೀಕ್ಷಾ ಕಾರ್ಯಕ್ರಮ.ಶಿವ ದೀಕ್ಷಾ ಕಾರ್ಯಕ್ರಮದ ದಿವ್ಯ ನೇತೃತ್ವ ಪೂಜ್ಯ ಶ್ರೀ ಶ್ರೀ ಸದಾಶಿವ ಸ್ವಾಮೀಜಿಗಳು ಶ್ರೀ ಕ್ಷೇತ್ರ ಕಿರು ಕೊಡ್ಲಿಮಠ ಇವರಿಂದ ದೀಕ್ಷಾ ವಟುಗಳಿಗೆ ಆಶೀರ್ವಚನ.22ನೇ ಸೋಮವಾರ ಬೆಳಿಗ್ಗೆ ಐದು ಗಂಟೆಯಿಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರಿಗೆ ರುದ್ರಾಭಿಷೇಕ ಬೆಳಿಗ್ಗೆ 11:00ಗೆ ಸಭಾ ಕಾರ್ಯಕ್ರಮ ಪೂಜ್ಯ ಶ್ರೀ ಶ್ರೀ ಮಹಾಂತ ಸ್ವಾಮಿಗಳು ಶ್ರೀ ಕ್ಷೇತ್ರ ಕಲ್ಮಠ ಹಾಗೂ ಪೂಜಾ ಶ್ರೀ ಶ್ರೀ ಸದಾಶಿವ ಸ್ವಾಮೀಜಿ ಗಳಿಂದ ಆಶೀರ್ವಚನ.ಅಧ್ಯಕ್ಷತೆ ವಿ ಎಸ್ ಜೈಪ್ರಕಾಶ್ ಮುಖ್ಯ ಅತಿಥಿಗಳು ಎಚ್ಎನ್ ದೇವರಾಜ್.ಮಧ್ಯಾಹ್ನ 2 ಗಂಟೆಗೆ ಪ್ರಶಾಂತ್ ಚಿತ್ರಗುತಿ ಇವರಿಂದ ಆಧ್ಯಾತ್ಮಿಕ ಚಿಂತನಾ ಸಭೆ.5 ಗಂಟೆಗೆ ಶ್ರೀ ನಂದೀಶ್ವರ ಸ್ವಾಮಿಯ ಪ್ರಾಣ ಪ್ರತಿಷ್ಠಾಪನೆಗೆ ಮತ್ತು ಉತ್ಸವಕ್ಕೆ ಹೊರಡುವುದು.23ನೇ ತಾರೀಕು ಮಂಗಳವಾರ ಬೆಳಿಗ್ಗೆ 8.30 ಕ್ಕೆ ಶ್ರೀ ನಂದೀಶ್ವರ ಸ್ವಾಮಿಯ ಮೆರವಣಿಗೆ ಮತ್ತು ವೀರ ಗಾರರ ಹಾಗೂ ನಂದಿ ದ್ವಜ ಕುಣಿತ.ಬೆಳಿಗ್ಗೆ 11 ಗಂಟೆಯಿಂದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಸಿದ್ದಗಂಗಾ ಮಠ ಇವರಿಂದ ಆಶ್ರೀವಚನ. ದಿವ್ಯ ಉಪಸ್ಥಿತಿ ಶ್ರೀ ಶ್ರೀ ಮಹಾಂತ ಸ್ವಾಮಿಗಳು, ಶ್ರೀ ಶ್ರೀ ಸದಾಶಿವ ಸ್ವಾಮಿಗಳು, ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ತೆಂಕಲಗೂಡು ಬೃಹನ್ಮಠ ಯಸಳೂರು ಸಕಲೇಶಪುರ ತಾಲೂಕು.ಅಧ್ಯಕ್ಷತೆ ವಿ ಎಸ್ ಜೈಪ್ರಕಾಶ್ ಮುಖ್ಯ ಅತಿಥಿಗಳು ಬಿ ಆರ್ ಗುರುದೇವ್.ಮಧ್ಯಾಹ್ನ 1:30ಕ್ಕೆ ದಾಸೋಹ.ಸಂಜೆ 6 ರಿಂದ 7 ಗಂಟೆಗೆ ಶ್ರೀ ನಂದೀಶ್ವರ ಸ್ವಾಮಿವರ ಕೆಂಡೋತ್ಸವ.