ಸಕಲೇಶಪುರ: ನಗರದ ಸ್ವಚ್ಚತೆಗೆ ಪ್ರತಯೊಬ್ಬ ನಾಗರೀಕರು ಸಹಕರಿಸುವ ಮೂಲಕ ಕಸ ಮುಕ್ತ ನಗರಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ನೂತನ ಶಾಸಕ ಸಿಮೆಂಟ್ ಮಂಜು ಹೇಳಿದರು.ಶನಿವಾರ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಪುರಸಭೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನನ್ನ ಲೈಫ್ ನನ್ನ ಸ್ವಚ್ಚ ನಗರ ಕಾರ್ಯಕ್ರಮವನ್ನು ಹಳೆಯ ಬಟ್ಟೆಯನ್ನು ಬ್ಯಾರಲ್ ಗೆ ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು ನಮ್ಮ ನಗರವನ್ನು ಸ್ವಚ್ಚವಾಗಿಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಚಚ್ಚ ಭಾರತ್ ಮಿಷನ್ 2.0 ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಅಭಿಯಾನವನ್ನು ಆರಂಭ ಮಾಡಿದ್ದು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸೇರಿದಂತೆ ಆಟಿಕೆ ವಸ್ತುಗಳು ಬಳಸಿದ ಬಟ್ಟೆ ,ದಿನಪತ್ರಿಕೆಗಳು ,ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ 0.6 ಬಗೆಯ ನವೀಕರಿಸಿ ಮರುಬಳಸಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವುದು ಲೈಫ್ ಮಿಷನ್ ನ ಪ್ರಮುಖ ಉದ್ದೇಶವಾಗಿದೆ ಎಂದರು.ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಡಾ.ಜಯಣ್ಣ, ಪುರಸಭೆ ಅಧ್ಯಕ್ಷ ಕಾಡಪ್ಪ , ಪುರಸಭೆ ಸದಸ್ಯರುಗಳಾದ ಯಾದ್ ಗಾರ್ ಇಬ್ರಾಹಿಂ, ಪ್ರದೀಪ್, ವನಜಾಕ್ಷಿ, ರೇಖಾ ರುದ್ರಕುಮಾರ್ , ಕಿರಿಯ ಇಂಜಿನೀಯರ್ ಕವಿತಾ , ಮ್ಯಾನೇಜರ್ ವಿಜಯ್ ಕುಮಾರ್ ದಾನಪ್ಪ ,ರೇವಣ್ಣ ,ಚಂದ್ರು, ಇತರ ಸಿಬ್ಬಂದಿಗಳು ಹಾಜರಿದ್ದರು.