
ಸಕಲೇಶಪುರ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಬೆಳಗೋಡು ಹೋಬಳಿಯ ಬಾಳ್ಳುಪೇಟೆ ಗ್ರಾಮಪಂಚಾಯಿತಿಯ ಬಸವೇಶ್ವರ ನಗರ ನಿವಾಸಿಗಳಾದ ಚೇತನ್ ಹಾಗೂ ಶೀಲ ರವರ ಪುತ್ರಿ ಧನ್ಯ ಶ್ರೀ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಗಳಿಸಿದ್ದಾರೆ ಇವರಿಗೆ ರಘುಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಯಡೆಹಳ್ಳಿ ಆರ್ ಮಂಜುನಾಥ್ ಕರವೇ ಗೌರವಾಧ್ಯಕ್ಷರು ರಾಜ್ಯಕ್ಕೆ ಗೌರವ ತಂದುಕೊಟ್ಟ ಇವರ ಕುಟುಂಬಕ್ಕೆ ಶುಭಾಶಯ ಕೋರಿ, ಅಭಿನಂದನೆ ಸಲ್ಲಿಸಿದರು ಹಾಗೆ ಧನ್ಯ ಶ್ರೀ ಯು ಮುಂದಿನ ಭವಿಷ್ಯ ಉಜ್ವಲಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಪಿಬೆಳೆಗಾರರು ಆದ ಚಂದ್ರಶೇಖರ್ ಎಂ ಎಸ್, ಶಿಕ್ಷಕರ ಹರೀಶ್ ರೈ, ಕರವೇ ಕಾರ್ಯಕರ್ತರಾದ ಚಂದ್ರು, ಮಂಜು, ರಘು, ರಿತೇಶ್, ಮುಂತಾದವರು ಇದ್ದರು.
