ಹಾಸನ: ಜಿಲ್ಲೆಯ ಬಾಳ್ಳುಪೇಟೆಯ ಎ.ವಿಕ್ಟರ್ ಮತ್ತು ಪಿ.ಜೆ.ಹೆಲೆನ್ ಅವರ ದಂಪತಿ ಪುತ್ರ ವಿನಿ ಸಾಜನ್ ವಿಕ್ಟರ್ ಅವರು ಜರ್ಮನಿಯ ಪ್ರತಿಷ್ಠಿತ ಯೂನಿವರ್ಸಿಟಿ ಕೈಜರ್ ಸ್ಫೋಟರ್ನ್‌ನಲ್ಲಿ ಡಾಕ್ಟರೇಟ್ ಪದವಿ ಪಡೆದು ಕೀರ್ತಿ ತಂದಿದ್ದಾರೆ.

ವಿನಿ ಸಾಜನ್ ವಿಕರ್ ಅವರು ಎಂ.ಎಸ್. ಪದವಿಯಲ್ಲಿ ಮಾಸ್ಟರ್ಸ್ ಇನ್ ಕಂಪ್ಯೂಟರ್ ಸೈನ್ಸ್ ಸ್ಪೆಷಲೈಸಿಂಗ್ ಎಗ್ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ ವಿಷಯದಲ್ಲಿ ವ್ಯಾಸಂಗ ಮಾಡಿದ್ದಾರೆ.ಅಲ್ಲದೆ ಕೈಜ್ಜರ್ ಸೌಟರ್ನ್ ಯೂನಿವರ್ಸಿಟಿ, ಜರ್ಮನಿಯಲ್ಲಿ ಇನ್ ಫಾರ್ಮಡ್ ಮಶೀನ್ ಲರ್ನಿಂಗ್ ಅಂಡ್ ವಿಜುವಲ್ ಅನಾಲಿಟಿಕ್ಸ್ ಫಾರ್ ವಿರ್ಚುವಲ್ ಸ್ಪಿನ್ನಿಂಗ್ ನಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.

ವಿನಿ ಸಾಜನ್ ವಿಕ್ಟರ್ ತಮ್ಮ ಹುಟ್ಟೂರು ಬಾಳ್ಳುಪೇಟೆಯಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು, ಬೆಂಗಳೂರಿನ ಸಿಎಂಆರ್‌ಐಟಿ ಕಾಲೇಜಿನಲ್ಲಿ ತಮ್ಮ ಇಂಜಿನಿಯರ್ ಪದವಿ ಪೂರ್ಣಗೊಳಿಸಿದರು.ಬಳಿಕ ಬಾಷ್ ಕಂಪೆನಿಯಲ್ಲಿ ಮೂರು ವರ್ಷದ ಅನುಭವ ಪಡೆದುಕೊಂಡು ಎಂ.ಎಸ್.ಪದವಿ ವ್ಯಾಸಂಗಕ್ಕಾಗಿ ಜಮರ್ನಿಗೆ ತೆರಳಿ ಕೈಜರ್ ಸ್ಫೋಟರ್ನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.ಇನ್ನು ಅದೇ ವಿಶ್ವವಿದ್ಯಾನಿಲಯ ದಲ್ಲಿ ಪಿಎಚ್‌ಡಿ ಪದವಿಗೆ ಪ್ರವೇಶ ಪಡೆದು ಡಾಕ್ಟರೇಟ್ ಪಡೆದುಕೊಂಡಿದ್ದಾರೆ.

ಬಾಷ್ ಕಂಪೆನಿಯಲ್ಲಿ ಆಟೋಮೋಟಿವ್ ಇಂಡಸ್ಟ್ರಿಯಲ್ಲಿ ವೃತ್ತಿಯಲ್ಲಿ ಇದ್ದಾಗ ಅಲ್ಲಿನ ಡ್ರೈವರ್‌ಲೆಸ್ ಕಾರ್ ಮತ್ತು ಆರ್ಟಿಫಿಶಿಯಲ್ ಇಂಟಲಿಜನ್ಸ್‌ನಂತಹ ವಿಷಯಗಳಲ್ಲಿ ಆಸಕ್ತಿ ಬೆಳೆಸಿ ಕೊಂಡಿದ್ದರು. ಹೀಗಾಗಿ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ತೆರಳಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *