ಹಾಸನ : ಅರಕಲಗೂಡು ದೊಡ್ಡ ಮಗ್ಗೆಯ ಹಿರಿಯ ಬೆಳೆಗಾರರೂ, ಇಸ್ರೇಲ್ ಮಾದರಿ ಹೈನುಗಾರಿಕೆ ಮಾಡುತ್ತಿರುವ,ಕೃಷಿಕರು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪಡೆದ ರಂಗಸ್ವಾಮಿ ರವರನ್ನು ಗೌರವಿಸಲಾಯಿತು.
ಹಾಗೆ ಆಲೂರು ತಾಲ್ಲೂಕು, ಹೊಸಕೋಟೆ ಹೋಬಳಿ, ಕಿತಾಗಳಲೆ ಗ್ರಾಮದ ಕಲ್ಯಾಣ ಕುಮಾರ್ ಮತ್ತು ಪದ್ಮಾವತಿ ದಂಪತಿಗಳ ಮಗಳಾದ ಕುಮಾರಿ ಸುಕನ್ಯಾ ರವರು ಜಡ್ಜ್ ( ನ್ಯಾಯದೀಶೆ ) ಪರೀಕ್ಷೆಯಲ್ಲಿ ಉತ್ತಿರ್ಣವಾಗಿದ್ದು, ಬಹಳ ಬಡತನದಲ್ಲಿ ಬೆಳೆದು ಸ್ವಂತ ಮನೆಗೆ ಹೋಗಲು ರಸ್ತೆ ಹಾಗೂ ಕುಡಿಯುವ ನೀರಿಗೆ ಸುಮಾರು 25 ವರ್ಷಗಳಿಂದ ತೊಂದ್ರೆ ಇದ್ದು, ಈ ಒಂದು ಸಮಸ್ಯೆ ಬಗೆಹರಿಸಿಕೊಳ್ಳವು ನಿಟ್ಟಿನಲ್ಲಿ ಕಠಿಣ ಪರಿಶ್ರಮ ವಹಿಸಿ ನ್ಯಾಯಾದೀಶೆ ಆಗಬೇಕೆಂಬ ಛಲದಿಂದ ಓದಿ ನ್ಯಾಯದೀಶೆ ಯಾಗಿರುವ ಕುಮಾರಿ ಸುಕನ್ಯಾ ರವರನ್ನು ಗೌರವಿಸಲಾಯಿತು.
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ, ಲೋಹಿತ್, ಉಪಾಧ್ಯಕ್ಷ ಮಂಜುನಾಥ್, ಸಹಕಾರ್ಯದರ್ಶಿ ಅರುಣ್ ಹಾಗೂ ಮಾಜಿ ಅಧ್ಯಕ್ಷರುಗಳು ಹಾಗೂ ವಿವಿಧ ಹೋಬಳಿ ಹಾಗೂ ತಾಲ್ಲೂಕು ಸಂಘಗಳ ಪದಾಧಿಕಾರಿಗಳು ಸಭೆಯಲ್ಲಿ ಬಾಗಿ ಆಗಿದ್ದು, ಸಾಧಕರಿಗೆ ದೇವರು ಉತ್ತಮ ಅರೋಗ್ಯ ಭಾಗ್ಯ ಕರುಣಿಸಲಿ ಎಂದು ಹಾರೈಸಿದರು