ಅದ್ದೂರಿಯಾಗಿ ನಡೆದ ರೈಲ್ವೆ ಚೌಡೇಶ್ವರಿ ವಾರ್ಷಿಕ ಪೂಜೆ. ಸಕಲೇಶಪುರ : ಪಟ್ಟಣದ ರೈಲ್ವೆ ಚೌಡೇಶ್ವರಿ ಅಮ್ಮನವರ ವಾರ್ಷಿಕ ಪೂಜೆ ಕಾರ್ಯಕ್ರಮ ಇಂದು ಅದ್ದೂರಿಯಾಗಿ ಜರುಗಿತು.ನೂರಾರು ಭಕ್ತಾದಿಗಳು ಅಮ್ಮನವರ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪೂಜಾ ಕಾರ್ಯಕ್ರಮಕ್ಕೆ ಬಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು .**ಗಾಳಿ ಮಳೆಗೆ ಹಾರಿಹೋದ ಶಾಮಿಯಾನ* ಪೂಜಾ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ನೆರವಾಗಲೆಂದು ಹಾಕಲಾಗಿದ್ದ ಶಾಮಿಯಾನ ಗಾಳಿ ಮಳೆಗೆ ಹಾರಿದ ಪರಿಣಾಮ ರೈಲ್ವೆ ಕ್ವಾಟ್ರಸ್ಗೆ ಅಳವಡಿಸಲಾಗಿದ್ದ ಶೀಟ್ ಗಳು ಒಡೆದು ಹೋಗಿವೆ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ರೈಲ್ವೆ ಮಜ್ದೂರ್ ಯೂನಿಯನ್ ಸಂಘದ ಅಧ್ಯಕ್ಷ ಬಾಬಣ್ಣ, IOW ಆಫಿಸ್ ಕುಲ್ಚಂದ್, ಗೋವಿಂದರಾಜ್, ಲಕ್ಷ್ಮಣ್, ಉನ್ನಿಕೃಷ್ಣ, ಮಿತುನ್, ಅವಿನಾಶ್, ಸತೀಶ್, ನವೀನ್, ಪ್ರದೀಪ್, ಜಸ್ವಂತ್ ಹಾಗೂ ಅರ್ಚಕರಾದ ಶಂಕರಪ್ಪ ಇತರರು ಇದ್ದರು.