ಆಲೂರು :- ತಾಲೂಕಿನ ತಾಳೂರಿನಲ್ಲಿ ಸುಮಾರು 25 ದಿನಗಳಿಂದ ಸತತವಾಗಿ ಚಿತ್ರೀಕರಣ ಗೊಳ್ಳುತ್ತಿರುವ ಪುಟ್ಟ ಗೂಡಿನ ಪಟ್ಟದರಸಿ ಎಂಬ ಮಕ್ಕಳ ಕನ್ನಡ ಚಲನಚಿತ್ರಕ್ಕೆ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.

ಮಹಾಲಕ್ಷ್ಮಿ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮಿ ಕುಮಾರ್ ಈ ಚಲನಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಕಲೇಶಪುರ ತಾಲೂಕಿನವರೇಯಾದ ಪತ್ರಕರ್ತರಾದ ಅರುಣ್ ಗೌಡ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಚಿತ್ರವು ಶಿಕ್ಷಕರು ಹಾಗೂ ಸಾಹಿತಿಗಳಾದ ಕೊಟ್ರೇಶ್ ಉಪ್ಪಾರ್ ಬರೆದಿರುವ ಪುಟ್ಟಗೂಡಿನ ಪಟ್ಟದರಸಿ ಎಂಬ ಕಾದಂಬರಿ ಆಧರಿತವಾಗಿದ್ದು,ಬಹುತೇಕ ಮಾತಿನ ಹಂತದ ಚಿತ್ರೀಕರಣ ಮುಗಿಯುತ್ತ ಬಂದಿದೆ

ಗುರುವಾರ ಆಲೂರಿನ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪ್ರಭಂದ ಸ್ವರ್ಧೆಯ ಚಿತ್ರಿಕಾರಣ ನೆಡೆಸಲಾಯಿತು.

ಈ ಚಿತ್ರದಲ್ಲಿ ಬರುವ ಸನ್ನಿವೇಶ ಒಂದರಲ್ಲಿ ಸ್ಕೌಟ್ ಅಂಡ್ ಗೈಡ್ ವತಿಯಿಂದ ನಡೆಸುತ್ತಿದ್ದ “ಪರಿಸರ ನಾಶಕ್ಕೆ ಮಾನವನ ದುರಾಸೆಯ ಕಾರಣ ಎಂಬ ಪ್ರಬಂಧ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧ್ಯಕ್ಷರ ಪಾತ್ರಕ್ಕೆ ಶಾಸಕರಾದ ಸಿಮೆಂಟ್ ಮಂಜುನಾಥ್ ಬಣ್ಣ ಹಚ್ಚುವ ಮೂಲಕ ಮಲೆನಾಡಿನ ಹಚ್ಚಹಸಿರಿನ ಭಾಗವು ಮಾನವನ ದುರಾಸೆಗೆ ಅವನತಿಗೊಳ್ಳುತ್ತಿದೆ ಇದರಿಂದ ಬಿಸಿಲಿನ ತಾಪಮಾನ ಏರುತ್ತಿರುವುದು ಜೊತೆಗೆ ಪ್ರಕೃತಿ ನಾಶದಿಂದ ರೈತರು ಹಾಗೂ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸುತ್ತಾ ಈ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿರುವುದು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತದೆ ಎಂಬುದರ ಬಗ್ಗೆ ವಿವರಿಸುವ ಪಾತ್ರ ಮಾಡಿದರು.

ಮುಖ್ಯ ಅತಿಥಿ ಪಾತ್ರವಂದರಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾರವರು ಭಾಗವಹಿಸಿ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಎಲ್ಲಾ ಸಂದರ್ಭದಲ್ಲೂ ಕೂಡ ತಮ್ಮ ನಿಸ್ವಾರ್ಥ ಸೇವೆಗೆ ಮುಂದು ಬರಲಿದ್ದಾರೆ. ಇವರ ಬದುಕಿನ ಕಥಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯ ವಿಚಾರವೆಂದರು.

ಚಿತ್ರಕ್ಕೆ ಸಂಭಾಷಣೆಯನ್ನು ವಿಜಯ ಹಾಸನ್ ಬರೆದಿದ್ದು , ಛಾಯಾಗ್ರಹಣ ಚಂದು, ಸಹ ನಿರ್ದೇಶನ ಶರತ್ ಬಾಬು,ಅನಿಲ್ ಕುಮಾರ್, ಸಹಾಯಕ ನಿರ್ದೇಶಕ ಅರ್ಜುನ್ ಕ್ಷತ್ರಿಯ. ತಾರಾಗಣದಲ್ಲಿ ಸಿದ್ದುಮಂಡ್ಯ, ಪೂಜಾ ರಘುನಂದನ್, ಕುಮಾರಿ ಶರಣ್ಯ, ಗ್ಯಾರಂಟಿ ರಾಮಣ್ಣ, ಲತಾಮಣಿ ತುರುವೇಕೆರೆ, ಎಚ್.ಎಸ್.ಪ್ರಭಾಕರ್, ಅಂಬಿಕಾ, ಮುರುಳಿ ಹಾಸನ್, ಸಾಸು ವಿಶ್ವನಾಥ್, ಶರತ್ ಬಾಬು, ಡಾ.ಹಸೀನಾ ಎಚ್.ಕೆ, ಬಿ.ಪಿ.ಗಿರೀಶ್, ಭಾನುಮತಿ, ಸುನಿತಾ ಮಂಜುನಾಥ್,ಶಶಿಚಂದ್ರಿಕಾ, ರೀನಾ, ಧರ್ಮ ತಾಳೂರು, ಸ್ಪೂರ್ತಿ, ಸಿಂಚನ, ದೀಪಿಕಾ, ಹೇಮಲತಾ, ಶ್ರೇಯಸ್, ವೀಣಾ, ಆಶಾ, ಲಕ್ಷ್ಮಿ, ಯಶಸ್, ಚಂದನ್, ಅರ್ಜುನ್ ಕ್ಷತ್ರಿಯ, ರೇವಂತ್( ಲೈಗರ್ ), ಮಾರೇಶ್( ಪೂಜಾರಿ ದುರ್ಗೇಶ್ ), ಗಿರೀಶ್ ಗಾಂಧರ್ವ,ಶ್ವೇತಾ ಮಂಜುನಾಥ್, ಉಷಾ ಸೇರಿದಂತೆ ಹಲವರಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *