3 ದಿನಗಳ ಕಾಲ ಅದ್ದೂರಿಯಾಗಿ ನಡೆದ ಶ್ರೀ ನಂದೀಶ್ವರ ಜಾತ್ರಾ ಮಹೋತ್ಸವ..ಕಳೆದ ಮೂರು ದಿನಗಳಿಂದ ತಾಲೂಕಿನ ಬೊಮ್ಮನಕೆರೆ ಹಾಗೂ ಹರಗರಹಳ್ಳಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ವತಿಯಿಂದ ಅದ್ದೂರಿ ಶ್ರೀ ನಂದೀಶ್ವರಸ್ವಾಮಿ ಜಾತ್ರಾ ಮಹೋತ್ಸವ ಜರುಗಿತು . ಬೆಳಗ್ಗೆಯಿಂದ ಶ್ರೀ ನಂದೀಶ್ವರ ಸ್ವಾಮಿ ಅವರ ಮೆರವಣಿಗೆ ನಡೆಯಿತು.ನಂದಿದ್ವಜ, ವೀರಗಾಸೆ, ಕಾರ್ಯಕ್ರಮ ಪೂಜಾ ಕಾರ್ಯಕ್ರಮಕ್ಕೆ ಮೆರಗು ನೀಡಿತು.ಈ ಪೂಜಾ ಕಾರ್ಯಕ್ರಮದಲ್ಲಿ ಸಿದ್ದಗಂಗ ಮಠದ ಶ್ರೀ ಶ್ರೀ ಶ್ರೀ ಪರಮಪೂಜ್ಯ ಸಿದ್ದಲಿಂಗ ಮಹಾ ಸ್ವಾಮಿ, ಶ್ರೀ ಕ್ಷೇತ್ರ ಸಿದ್ದಗಂಗಾ ಮಠ, ದಿವ್ಯ ಉಪಸ್ಥಿತಿ ಶ್ರೀ ಶ್ರೀ ಮಹಾಂತಸ್ವಾಮಿಗಳು, ಶ್ರೀ ಶ್ರೀ ಸದಾಶಿವ ಮಹಾಸ್ವಾಮಿಗಳು, ಶ್ರೀ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿದ್ಯವಹಿಸಿದಗದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಎಸ್.ಜಯಪ್ರಕಾಶ್, ಹಾಗೂ ಮುಖ್ಯ ಅತಿಥಿಯಾಗಿ ಬಿ.ಆರ್.ಗುರುದೇವ್ ಉಪಸ್ಥಿತರಿದ್ದರು.ಈ ಎಲ್ಲಾ ಪೂಜಾಕಾರ್ಯಕ್ರಮಗಳಿಗೆ ಹರಗರಹಳ್ಳಿ ,ಬೊಮ್ಮನಕೆರೆ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು, ಇದೇ ಸಂದರ್ಭದಲ್ಲಿ ಸಮಾಜ ಸೇವಕ ಬನ್ನಹಳ್ಳಿ ಪುನಿತ್ ಅವರ ಸಮಾಜ ಸೇವೆಗೆ ಸ್ವಾಮಿಜಿಯವರು ಪ್ರಶಂಸೆ ವ್ಯಕ್ತಪಡಿಸಿದರು.